ಬಾಲಕಿ ಸಾವಿನಿಂದ ಕುಟುಂಬಕ್ಕೆ ಬರ ಸಿಡಿಲು

Yelburga child girl murder
Published on

ಯಲಬುರ್ಗಾ: ಜೀವನ ಸಾಗಿಸಲು ಹುಬ್ಬಳ್ಳಿಗೆ ತೆರಳಿದಾಗ ಕಿರಾತಕನಿಂದ ಕರುಳಿನ ಕುಡಿ ಇಹಲೋಕ ತ್ಯಜಿಸಿರುವುದು ತಾಲೂಕಿನ ಗ್ರಾಮವೊಂದರ ಬಡ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

ಹುಬ್ಬಳ್ಳಿಯಲ್ಲಿ ಏ.13 ರಂದು ಬಿಹಾರದ ಕಿರಾತಕ ರಿತೇಶ್ ಕುಮಾರನಿಂದ ಯಲಬುರ್ಗಾ ತಾಲೂಕಿನ ಗ್ರಾಮವೊಂದರ ಬಾಲಕಿ ಕೊಲೆಯಾಗಿದ್ದಳು. ಪೊಲೀಸರು ಆತ್ಮರಕ್ಷಣೆಗೆ ರಿತೇಶ್ ಗುಂಡೇಟಿಗೆ ಹತನಾದನು. ಇದು ದೇಶದಲ್ಲಿ ವ್ಯಾಪಕ ಮೆಚ್ಚುಗೆಗೆ ಕಾರಣವಾಯಿತು. ಆದರೆ ದುಡಿಮೆ ಅರಸಿ ದೂರದ ಹುಬ್ಬಳ್ಳಿಗೆ ತೆರಳಿದಾಗ ಮಗಳನ್ನು ಕಳೆದುಕೊಂಡ ಪಾಲಕರ ಸ್ಥಿತಿ ದೇವರೇ ಬಲ್ಲ.ಶರಣಪ್ಪ ಹಾಗೂ ಲತಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲನೇ ಮಗಳು ಅಂಗವಿಕಲೆ. ಎರಡನೇಯ ಮಗಳೇ ಬಿಹಾರದ ದುಷ್ಕರ್ಮಿಯಿಂದ ಕೊಲೆಯಾದವಳು. ಅವಳು ಕುಟುಂಬದಲ್ಲಿ ಪ್ರೀತಿಗೆ ಪಾತ್ರಳಾಗಿದ್ದಳು. ಅಲ್ಲದೆ ತುಂಟತನ ಎಲ್ಲರಿಗೂ ಅಚ್ಚುಮೆಚ್ಚು. ಬಾಲಕಿ ಕಿರಾತಕನ ಸಂಚಿಗೆ ಬಲಿಯಾಗಿದ್ದು ಕುಟುಂಬದ ನೋವಿಗೆ ಕೊನೇ ಇಲ್ಲದಂತಾಗಿದೆ.

ಮಗಳು ಮೃತಪಟ್ಟಿರುವುದು ಜೀವನದಲ್ಲಿ ಮರೆಯಲಾಗದ ನೋವು. ನನ್ನ ಉಸಿರು ಇರುವಾಗ ಮಗಳನ್ನು ಕಳೆದುಕೊಂಡಿರುವುದು ಬದುಕಿನಲ್ಲಿ ಏನೂ ಉಳಿದಿಲ್ಲ. ಕುಟುಂಬಕ್ಕೆ ಪೊಲೀಸ್ ಇಲಾಖೆಯಿಂದ ನ್ಯಾಯ ಸಿಕ್ಕಿದೆ. ಆದರೆ ಮಗಳು ಮರಳಿ ಬರುವುದಿಲ್ಲ ಎನ್ನುವ ನೋವು ಕಾಡುತ್ತಿದೆ. | ಶರಣಪ್ಪ ಬಾಲಕಿ ತಂದೆ ಮಗಳು ನೀಚನ ಕೃತ್ಯಕ್ಕೆ ಬಲಿಯಾಗಿರುವುದು ಮರೆಯುವ ಶಕ್ತಿ ನಮಗಿಲ್ಲ. ಪೊಲೀಸರ ಗುಂಡೇಟಿಗೆ ಪಾಪಿ ಜೀವ ಬಿಟ್ಟಿದ್ದಾನೆ. ಇಂತಹ ಪಾಪಿಗಳಿಗೆ ಇದೆ ತರಹದ ಶಿಕ್ಷೆ ಆಗಬೇಕು. | ಲತಾ ಬಾಲಕಿ ತಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net