ಆರು ತಿಂಗಳಲ್ಲಿ ಏಕರೂಪ ಕಾನೂನು ಜಾರಿ ಮಾಡದ್ದಿರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾನೂನು ಹೋರಾಟ

Screenshot_2023_0718_134048.png
Published on

ಬೆಳಗಾವಿ: 50ಲಕ್ಷಕ್ಕೂ ಹೆಚ್ಚು ಜನರು ಸಮಾನ ನಾಗರಿಕ ಸಂಹಿತೆ ಜಾರಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಮೀನಾಮೇಷ ಮಾಡದೇ ಕೂಡಲೇ ಸಮಾನ ನಾಗರಿಕ ಕಾನೂನು ಜಾರಿ ಮಾಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50ಲಕ್ಷಕ್ಕೂ ಹೆಚ್ಚು ಜನರು ಸಮಾನ ನಾಗರಿಕ ಸಂಹಿತೆ ಜಾರಿಗೆ ಬೆಂಬಲ ನೀಡಿದ್ದಾರೆ.ಕೇಂದ್ರ ಸರ್ಕಾರ ಮೀನಾಮೇಷ ಮಾಡದೇ ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು‌.

ಸಮಾನ ನಾಗರಿಕ ಕಾನೂನಿಗೆ ಆಗ್ರಹಿಸಿ ಶ್ರೀರಾಮಸೇನೆ ಸಂಘಟನೆ‌ ನೇತೃತ್ವದಲ್ಲಿ ಇವತ್ತಿನಿಂದ ಜುಲೈ 28ರವರೆಗೆ 5ಲಕ್ಷ ಸಹಿ ಸಂಗ್ರಹ ಅಭಿಯಾನ ಆರಂಬ ಮಾಡುತ್ತೇವೆ.ಇಡೀ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಆರಂಭ ಆಗುತ್ತದೆ.ಕಳೆದ ಮೂವತ್ತು ವರ್ಷಗಳಿಂದ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸರ್ಕಾರಗಳಿಗೆ ಹೇಳುತ್ತಿದೆ.ಪದೇ ಪದೇ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಹೇಳುತ್ತಿದ್ದರೂ ಕಾನುನೂ ಜಾರಿ ಆಗುತ್ತಿಲ್ಲ.ಕಾಂಗ್ರೆಸ್ ಮಾಡಿದ ಮುಸ್ಲಿಂ ತುಷ್ಠೀಕರಣದ ಪರಿಣಾಮ ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದರು.

ನೀವು 9ವರ್ಷ ಕಾಯೋ ಅಗತ್ಯ ಇರಲಿಲ್ಲ ಎಂದ ಕೇಂದ್ರ ಸರ್ಕಾರಕ್ಕೆ ತಿವಿದ ಮುತಾಲಿಕ್ ಯುಸಿಸಿಗೆ ಈಗಾಗಲೇ ಆಪ್, ಮಾಯಾವತಿ ಪಕ್ಷ ಬೆಂಬಲಿಸಿದೆ.ಕಾಂಗ್ರೆಸ್‌ನವರು ಇದನ್ನು ವಿರೋಧಿಸುತ್ತಾ, ತುಷ್ಟೀಕರಣ ಮಾಡುತ್ತಿದ್ದಾರೆ.ಮುಸ್ಲಿಂ ವೈಯಕ್ತಿಕ‌ ಮಂಡಳಿ,ಮುಲ್ಲಾ, ಮೌಲ್ವಿಗಳು, ಮುಸ್ಲಿಂ ವಿರೋಧ ಮಾಡ್ತಾರೆ.ಕುರಾನ್, ಶರಿಯಾ ಕಾನೂನು ಪ್ರಕಾರ ನಡೆಯಬೇಕು ಅಂತಾ ಅವರ ವಿರೋಧ ಮಾಡುತ್ತಿದ್ದಾರೆ.ಇದನ್ನು ವಿರೋಧಿಸಿದ್ರೆ‌ ನಾವು ಮುಸ್ಲಿಮರ ವಿರುದ್ದ ಹೋರಾಟ ಮಾಡುತ್ತೇವೆ.ನಿಮಗೆ ಶರಿಯಾ ಕಾನೂನು ಬೇಕಂದ್ರೆ ಅಪಘಾನಿಸ್ತಾಕ್ಕೆ ಹೋಗಬೇಕು. ಆರು ತಿಂಗಳಲ್ಲಿ ಕಾನೂನು ಜಾರಿ ತರಬೇಕು.ಇಲ್ಲವಾದರೆ ಸರ್ಕಾರದ ವಿರುದ್ಧ ಕೋರ್ಟ್ ನಲ್ಲಿ ದಾವೆ ಹೂಡುವ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net