

ಹನೂರು: ತಾಲೂಕಿನ ಕೂಡಲೂರು ಗ್ರಾಮದ ಶ್ರೀ ಏಳುದಂಡೆ ಮುನೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಜ.16 ಮತ್ತು 17 ರಂದು ಆಯೋಜಿಸಲಾಗಿದೆ.
ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನದ ಆಡಳಿತ ಸಮಿತಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜ.16ರಂದು ಸಂಜೆ 4.30ಕ್ಕೆ ಗ್ರಾಮದಲ್ಲಿ ಶ್ರೀ ಗುಂಡೇಗಾಲದಯ್ಯ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಮಹಾ ಮಂಗಳಾರತಿ ಬೆಳಗಿಸಿ ಮಂಗಳ ವಾದ್ಯದೊಂದಿಗೆ ಗ್ರಾಮ ಹೊರವಲಯದಲ್ಲಿರುವ ದೇಗುಲಕ್ಕೆ ಕೊಂಡೊಯ್ಯಲಾಗುವುದು. 17ರಂದು ಬೆಳಗ್ಗೆ 5.30 ರಿಂದ ಸಂಜೆ 6.30ರೊಳಗೆ ಸಲ್ಲುವ ಬ್ರಾಹ್ಮೀ ಮುಹೂರ್ತದಲ್ಲಿ ಸ್ವಾಮಿಗೆ ನೂರಂದು ಪೂಜೆ ಸಲ್ಲಿಸಿ ಹಾಲು, ಎಣ್ಣೆ ಹಾಗೂ ತುಪ್ಪದ ಮಜ್ಜನ ಸೇವೆ ನೆರವೇರಿಸಲಾಗುವುದು.
ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವವನ್ನು ಕೂಡಲೂರು ಹಾಗೂ ಸುತ್ತಮುತ್ತಲ ಗ್ರಾಮದ ಜನರು ವಿಜೃಂಭಣೆಯಿಂದ ನೆರವೇರಿಸಲಿದ್ದು, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಭಾಗಿಯಾಗಲಿದ್ದಾರೆ.