'ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು'; ರಾಜಕೀಯ ಗುರು ನೆನೆದು ಗದ್ಗದಿತರಾದ ಶಾಸಕ ರೇಣುಕಾಚಾರ್ಯ

ರೆನು
Published on

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಹಿನ್ನೆಲೆ ಬಿಎಸ್​​ವೈ ನಿರ್ಧಾರ ನೆನೆದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಗದ್ಗದಿತರಾದರು.

ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಹೆಸರು ಕೇಳಿದರೆ ಮೈ ರೋಮಾಂಚಕ ಆಗುತ್ತದೆ. ಎಲ್ಲೋ ಇದ್ದ ನನ್ನ ಬೆನ್ನು ತಟ್ಟಿ ರಾಜಕೀಯಕ್ಕೆ ತಂದವರು ಬಿಎಸ್​​ವೈ ನನ್ನ ಗುರು. ದಯವಿಟ್ಟು ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ರೇಣುಕಾಚಾರ್ಯ ಮನವಿ ಮಾಡಿದರು.

ಯಡಿಯೂರಪ್ಪ ಇಲ್ಲದ್ದನ್ನ ನಾನು ನೋಡಲು ಕೂಡ ಸಾಧ್ಯವಿಲ್ಲ. ರೇಣುಕಾಚಾರ್ಯ ಅವರನ್ನ ಮಾತ್ರವಲ್ಲ ಹಲವರನ್ನ ಬೆಳೆಸಿದ್ದಾರೆ ಎಂದು ಬಿಎಸ್​ವೈ ನೆನೆದು ಗದ್ಗದಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net