ಸರ್ಕಾರಕ್ಕೆ ವರ್ಷ ಪೂರ್ಣ ಕಾರ್ಯಕ್ರಮ; ನೇರ ಪ್ರಸಾರ ವೀಕ್ಷಣೆ; ಕಿರುಹೊತ್ತಗೆ ಬಿಡುಗಡೆ

shivaraj sir
Published on

ಬೆಂಗಳೂರು ಗ್ರಾಮಾಂತರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ರಾಜ್ಯಮಟ್ಟದ ಸಮಾರಂಭ ನಡೆಯಿತು.

ಜಿಲ್ಲಾ ಕೇಂದ್ರಗಳಲ್ಲಿ ಜನಸ್ನೇಹಿ ಆಡಳಿತದ ಒಂದು ವರ್ಷ, ಸಮಸ್ಯೆ-ಸವಾಲುಗಳ ವರ್ಷ, ಪರಿಹಾರದ ಸ್ಪರ್ಶ ಕಾರ್ಯಕ್ರಮವು ಏಕಕಾಲಕ್ಕೆ ಬಿತ್ತರಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯು ಎಲ್ಲ ಜಿಲ್ಲಾಡಳಿತಗಳೊಡನೆ ಸಮನ್ವಯ ಸಾಧಿಸಿದ್ದರಿಂದ ಕಾರ್ಯಕ್ರಮ ನೇರ ಪ್ರಸಾರಗೊಂಡಿತು.

ಜಿಲ್ಲಾಡಳಿತ ಭವನದಲ್ಲಿರುವ ಮುಖ್ಯ ಸಭಾಂಗಣದಲ್ಲಿ ವರ್ಚುವಲ್ ಪ್ಲಾಟ್‌ಾರಂ ಮೂಲಕ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತರಲಾದ ಕಿರುಹೊತ್ತಗೆಯನ್ನು ಮತ್ತು ಜನಪದ ಹಾಗೂ ಮಾರ್ಚ್ ಆ್ ಕರ್ನಾಟಕ ಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ, ದೇವನಹಳ್ಳಿ ತಾಪಂ ಅಧ್ಯಕ್ಷೆ ಶಶಿಕಲಾ ಆನಂದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಷ್ಪಾ ಜಿ.ರಾಯ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎನ್.ಎಸ್.ಮಹೇಶ್, ವಾರ್ತಾ ಸಹಾಯಕಿ ಹೇಮಾವತಿ.ಜೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net