ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ದಾಪುಗಾಲು

ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಮಾತನಾಡಿದರು.
ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಮಾತನಾಡಿದರು.
Published on

ಸುಂಟಿಕೊಪ್ಪ: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24 ನೇ ಸಾಲಿನಲ್ಲಿ 40,55,195 ರೂ. ಲಾಭ ಗಳಿಸಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ ಎಂದು ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಹೇಳಿದರು.

ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ಉಮೇಶ್ ಉತ್ತಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 93ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಸಂಘದ ಸದಸ್ಯರಿಗೆ ಭೂ ದಾಖಲಾತಿ ಆಧಾರದ ಮೇಲೆ ಕೆಪಿಸಿ ಫಸಲು, ಕೃಷಿಯೇತರ, ಮಧ್ಯಮಾವಧಿ ಕೃಷಿ, ವಾಹನ, ವೇತನ ಆಧಾರಿತ, ಆಭರಣ, ವ್ಯಾಪಾರ ಅಭಿವೃದ್ಧಿ, ಪಿಗ್ಮಿ ಠೇವಣಿ ಜವರ್ ಡ್ರಾಪ್ಟ್ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ಸಂಘದಲ್ಲಿ 1576 ಸದಸ್ಯರಿದ್ದು, ಪಾಲು ಬಂಡವಾಳ .1,14,80,35 ರೂ. ಇದೆ. 9,52,32,328 ರೂ. ಠೇವಣಿ ಸಂಗ್ರಹಿಸಲಾಗಿದೆ. 350 ಸದಸ್ಯರಿಗೆ 8,53,53,000 ರೂ. ಕೆಸಿಸಿ ಸಾಲ, 69,51,000 ರೂ. ಜಮೀನು ಸಾಲ ವಿತರಿಸಲಾಗಿದ್ದು, ಈ ಪೈಕಿ 2,67,198 ರೂ. ವಾಯಿದೆ ಮೀರಿದ ಸಾಲ ಇದೆ ಎಂದು ಹೇಳಿದರು.

ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಅಧ್ಯಕ್ಷನಾಗಿ 1990ರಲ್ಲಿ ಈ ಸಂಘವನ್ನು ಲಾಭದತ್ತ ತರಲು ಶ್ರಮಿಸಿದ್ದು, ಪ್ರಸ್ತುತ ಸಂಘದ ಆಡಳಿತ ಮಂಡಳಿ ಸದಸ್ಯರ ಶ್ರಮದಿಂದ ಸಂಘ ಬೆಳೆಯುತ್ತಿದೆ ಎಂದು ಹೇಳಿದರು.

ಕೇಂದ್ರ ಸಹಕಾರ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಯಾದ ಸಂಘದ ಅಧ್ಯಕ್ಷ ನಾಪಂಡ ಉತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ

ಧನ ನೀಡಿ ಗೌರವಿಸಲಾಯಿತು. ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ರಾಷ್ಟ್ರೀಯ ಸದಸ್ಯರ ಮಕ್ಕಳಿಗೆ ಧನ ಸಹಾಯ ವಿತರಿಸಲಾಯಿತು.
ಸದಸ್ಯರಾದ ಮಂದೆಯಂಡ ಗಣೇಶ್, ಪಿ.ಎಸ್.ರಮೇಶ, ಮೋಹನ್ ಕುಮಾರ್, ಕೊಪ್ಪತ್ತಂಡ ಗಣೇಶ, ಎಂ.ಪಿ.ಮನುಮುದ್ದಪ್ಪ, ಬಿದ್ದಪ್ಪ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕಾವೇರಪ್ಪ, ಉಪಾಧ್ಯಕ್ಷೆ ಸಿ.ಎಸ್.ಪವಿತ್ರಾ, ನಿರ್ದೇಶಕರಾದ ಬಿ.ಎ.ಮೊಣ್ಣಪ್ಪ, ಸಿ.ಪಿ.ತಮ್ಮಯ್ಯ, ಪಿ.ಪಿ.ತಿಲಕ್‌ಕುಮಾರ, ಕೆ.ಕೆ.ಕುಟ್ಟಪ್ಪ, ಎಂ.ಬಿ.ತಮ್ಮಯ್ಯ, ಎಂ.ಕೆ.ದೇಚಮ್ಮ, ಕೆ.ಎ.ಲತೀಫ್, ಎನ್.ಕೆ.ಭವಿನ್, ಎಂ.ಆರ್.ಗಿರೀಶ್ ಕುಮಾರ್, ಎಚ್.ಈ.ಭೀಮಯ್ಯ, ಎಂ.ವೈ.ಕೇಶವ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಟಿ.ಆರ್.ಪವನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net