

ಹುಬ್ಬಳ್ಳಿ: ಮತಾಂಧ ಹುಡುಗ ಅಮಾನುಷವಾಗಿ ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವುದು ಖಂಡನೀಯ. ಈ ವಿಚಾರದಲ್ಲಿ ರಾಜ್ಯ ಗೃಹ ಮಂತ್ರಿ ಹಾಗೂ ಮುಖ್ಯಮಂತ್ರಿಯವರು "ವೈಯಕ್ತಿಕ ವಿಷಯಕ್ಕೆ ನಡೆದ ಕೊಲೆ' ಎಂದು ಹೇಳಿರುವುದು ತೀವ್ರ ನೋವಿನ ಸಂಗತಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಬಿಡ್ನಾಳದಲ್ಲಿರುವ ನಿರಂಜನಯ್ಯ ಹಿರೇಮಠ ಅವರ ಮನೆಗೆ ಶುಕ್ರವಾರ ಸಂಜೆ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರು ಮಾನವೀಯ ದೃಷ್ಟಿಯಿಂದಲಾದರೂ ಹಿರೇಮಠ ಕುಟುಂಬದವರಿಗೆ ಸಾಂತ್ವನ ಹೇಳಬೇಕಿತ್ತು. ಅದು ಬಿಟ್ಟು ಅವರದೇ ಪಕ್ಷದ ಪಾಲಿಕೆ ಸದಸ್ಯರ ಮಗಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿರುವುದು ಸರಿಯಲ್ಲ ಎಂದರು.
ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದಾಗಲೂ ಗೃಹ ಸಚಿವರು ಹೀಗೆಯೇ ಉಡಾೆ ಉತ್ತರ ನೀಡಿದ್ದರು. ನಿಮ್ಮ ಪಕ್ಷದವರ ಕುಟುಂಬದವರಿಗೆ ಸುರಕ್ಷತೆ ಇಲ್ಲ ಎಂದ ಮೇಲೆ ನೀವು ಯಾರನ್ನು ರಕ್ಷಣೆ ಮಾಡುತ್ತೀರಿ? ಹಿಂದುಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡುವಂತಹ ಟನೆಗಳು ಪಾಕಿಸ್ಥಾನದಲ್ಲಿ ನಡೆಯುತ್ತವೆ ಎಂದು ಕೇಳುತ್ತಿದ್ದೇವು. ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವುದರಿಂದ ಕರ್ನಾಟಕದಲ್ಲೂ ಅಂತಹ ಟನೆ ನಡೆಯುತ್ತಿವೆ ಎಂದು ಅರೋಪಿಸಿದರು.
ಹೆಣ್ಣು ಮಗಳೊಬ್ಬಳ ಬಗ್ಗೆ ತಪು$್ಪ ಮಾಹಿತಿ ಹರಡುತ್ತಿದ್ದಾರೆ. ಒಂದು ವೇಳೆ ಆಕೆ ಪ್ರೀತಿ ಮಾಡಿದ್ದರೆ ಆತನೊಂದಿಗೆ ಹೋಗುತ್ತಿದ್ದಳು. ಏನು ಇಲ್ಲದೇ ಇದು ವೈಯಕ್ತಿಕ ವಿಚಾರ ಎಂದು ಹೇಳುವ ಸಿಎಂ, ಗೃಹ ಸಚಿವರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಅವರಿಗೆ ಮರ್ಯಾದೆ ಎಂಬುದು ಇದ್ದರೆ ಯಾಜ್ನನ್ನು ಎನ್ಕೌಂಟರ್ ಮಾಡಬೇಕು ಎಂದು ಸವಾಲು ಹಾಕಿದರು.
ನಾವೂ ಆಯುಧ ಇಟ್ಟುಕೊಳ್ಳಬೇಕೆ:
ಕಾಂಗ್ರೆಸ್ನವರು ಕೇವಲ ತುಷ್ಠಿಕರಣದಲ್ಲಿ ತೊಡಗಿರುವುದರಿಂದ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದುಗಳು ಕೂಡ ಆಯುಧ ಇಟ್ಟುಕೊಂಡು ಓಡಾಡಬೇಕೆ ಎಂದು ಪ್ರಶ್ನಿಸಿದ ಯತ್ನಾಳ ಅವರು, ಕಾಂಗ್ರೆಸ್ ನಾಯಕರು ತಮ್ಮ ಮನೆಗಳಲ್ಲಿ ಇಂತಹ ಟನೆ ಆಗಿದ್ದರೆ ಸುಮ್ಮನೆ ಇರುತ್ತಿದ್ದರೆ, ಮುಸ್ಲಿಂರ ಜತೆ ಇದ್ದೇವೆ ಎಂದು ಹೇಳುವುದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.