

ಚನ್ನಗಿರಿ: ಹಿಂದುಗಳ ಭವಿಷ್ಯಕ್ಕಾಗಿ ಹಿಂದು ರಾಜ್ಯ ಸ್ಥಾಪನೆ ಅವಶ್ಯ. ಯುವ ಸಮೂಹ ಇದಕ್ಕೆ ಸಂಕಲ್ಪ ಮಾಡಬೇಕಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ತಾಲೂಕಿನ ಮರಡಿ ಗ್ರಾಮದಲ್ಲಿ ಬಸವೇಶ್ವರ ವಿನಾಯಕ ಗೆಳೆಯರ ಬಳಗ ಬುಧ ವಾರ ಏರ್ಪಡಿಸಿದ್ದ ಧಾರ್ವಿುಕ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ಧರ್ಮವನ್ನು ಸಂತೈಸಲು ಮುಂದಾಗಿರುವ ರಾಜ್ಯ ಸರ್ಕಾರ, ಗಣಪತಿ ಸೇರಿ ಹಿಂದುಗಳ ಹಬ್ಬಗಳನ್ನು ಹತ್ತಿಕ್ಕಲು ಮುಂದಡಿ ಇಟ್ಟಿದೆ. ಇದಕ್ಕೆ ಧಿಕ್ಕಾರ ಇರಲಿ ಎಂದರು. ಗಣಪತಿ ಹಬ ಆಚರಣೆಗೆ ಇಲ್ಲದ ಕಾನೂನು ತರುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
1944ರಲ್ಲಿ ಅಂಬೇಡ್ಕರ್ ಅವರು ಪಾರ್ಟಿಷನ್ ಆಫ್ ಪಾಕಿಸ್ತಾನ್ ಪುಸ್ತಕದಲ್ಲಿ ದೇಶ ವಿಭಜನೆಗೆ ವಿರೋಧಿಸಿದ್ದರು. ವಿಭಜನೆ ಆಗಬೇಕೆಂದರೆ ಭಾರತದಲ್ಲಿರುವ ಎಲ್ಲ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಮತ್ತು ಪಾಕಿಸ್ತಾನದಲ್ಲಿರುವ ಎಲ್ಲ ಹಿಂದುಗಳು ಭಾರತಕ್ಕೆ ಬರಬೇಕು. ಆಗ ಮಾತ್ರ ವಿಭಜನೆಯಾದಂತೆ, ಇಲ್ಲದಿದ್ದರೆ ಭವಿಷ್ಯದಲ್ಲಿ ಮುಸ್ಲಿಮರು ಭಾರತಕ್ಕೆ ಸಮಸ್ಯೆಯಾಗಿ ಉಳಿಯುತ್ತಾರೆ ಎಂದು ಹೇಳಿದ್ದ ಮಾತು ಇಂದಿಗೂ ಸತ್ಯವಾಗಿದೆ ಎಂದು ಹೇಳಿದರು.
ರಾಜ್ಯಸರ್ಕಾರ ಅಭಿವೃದ್ಧಿ ಮರೆತಿದೆ.ವಿಧಾನಸಭೆಯಲ್ಲಿ ಗಟ್ಟಿಯಾಗಿ ಪ್ರಶ್ನಿಸುವ ಒಬ್ಬ ಶಾಸಕ ಇಲ್ಲದಿರುವುದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಕಪ್ಪುಪಟ್ಟಿ ಧರಿಸಿ ಗಣಪತಿಯ ಮೌನ ಮೆರವಣಿಗೆ ನಡೆದಿದೆ.ಹಿಂದು ಪದ ಬಳಸಲು ಸ್ಥಳೀಯ ಸಚಿವರು ಅನುಮತಿ ಕೊಟ್ಟಿಲ್ಲ. ಕೇವಲ ಒಂದು ಧರ್ಮದ ಓಲೈಕೆಗೆ ಮುಂದಾಗಿದ್ದಾರೆ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಧೈರ್ಯ, ಸಹನೆ, ರಾಜಕೀಯ ತಂತ್ರಗಾರಿಕೆ, ಪಾರದರ್ಶಕತೆ ಹಾಗೂ ಸಮಾಜವಾದವನ್ನು ಸ್ಮರಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಗಣಪತಿ ಹಬ್ಬ ಆಚರಣೆಗೆ ಪೋ›ತ್ಸಾಹ ನೀಡುವ ಬದಲು ಸಂಘಟಕರ ವಿರುದ್ಧ ಪ್ರಕರಣಗಳನ್ನು ಹಾಕುತ್ತಿರುವುದು ದುರಂತ ಎಂದರು.
ರೈತ ಹೋರಾಟಗಾರ, ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ, ರೈತರ ಬದುಕು ಬೆಳಗಲು ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು ಎಂದು ಆಶಿಸಿದರು.
ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಆರ್.ಐ. ಅಶೋಕ್ ಗೋಪನಾಳ್, ಜಿ.ಎಲ್. ರಾಜು ಸಿದ್ದೇಶ್, ತಾಲೂಕಾಧ್ಯಕ್ಷ ಎಚ್.ಕೆ. ಗಿರೀಶ್, ಪುಷ್ಪ ಪ್ರಕಾಶ್, ರೇಣುಕಮ್ಮ ಸಣ್ಣನಿಂಗಪ್ಪ, ಪವನಕುಮಾರ್, ವಿಶ್ವಾಸ್, ವೀರೇಶ್, ವಿನಾಯಕ ಬಳಗ ಮತ್ತು ಗ್ರಾಮಸ್ಥರು ಇದ್ದರು.