

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯ ಹಾಗೂ ಮೈಸೂರಿನ ಯೋಗಿ ನಾರೇಯಣ ಅವರ ಪರಿಚಯ ಮತ್ತು ಆತ್ಮಬೋಧೆ, ಯತೀಂದ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮಾ.3ರಂದು ಬೆಳಗ್ಗೆ 8.30ಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ತಿಳಿಸಿದರು.
ಅಂದು ಬೆಳಗ್ಗೆ 9.30ರಿಂದ 10.30ರವರೆಗೆ ವಾನರಾಶಿ ಬಾಲಕೃಷ್ಣ ಭಾಗವತರ್ ಅವರಿಂದ ಯೋಗಿನಾರೇಯಣ ಯತೀಂದ್ರರ ಕೀರ್ತನೆ ಹಾಗೂ ಸಾಮೂಹಿಕ ನಾಮಸಂಕೀರ್ತನೆ ಸಮರ್ಪಣೆ ನಡೆಯಲಿದೆ. 10.45ಕ್ಕೆ ಕೈವಾರ ಸದ್ಗುರು ನಾರೇಯಣಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಪ್ರವಚನ ನೀಡುವರು. ಮಧ್ಯಾಹ್ನ 12 ಗಂಟೆಗೆ ವಿಚಾರಗೋಷ್ಠಿ ಮತ್ತು ಯತೀಂದ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಂ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಾ.ಎಚ್.ಜಿ.ರಂಗರಾಜು, ಪ್ರೊ.ಕೆ.ನಾಗಾನಂದ್, ಎಂ.ಕೆ.ಜಗದೀಶ್, ಎಚ್.ಟಿ.ನಾಗೇಂದ್ರರಾವ್, ಬಿ.ಎಲ್.ಪುಟ್ಟಸ್ವಾಮಿ, ಎಚ್.ಆರ್.ಗೋಪಾಲಕೃಷ್ಣ ಹಾಜರಿದ್ದರು.