ಕೆ.ಎಂ.ದೊಡ್ಡಿಯಲ್ಲೂ ಮಹದೇಶ್ವರ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ

ಾಅಅಅಅ
Published on

ಕೆ.ಎಂ.ದೊಡ್ಡಿ: ಗ್ರಾಮಕ್ಕೆ ಆಗಮಿಸಿದ ಶ್ರೀ ಮಹದೇಶ್ವರ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಬಿಜೆಪಿ ಮುಖಂಡ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ಶ್ರೀ ಮಹದೇಶ್ವರ ಜ್ಯೋತಿ ರಥಯಾತ್ರೆಗೆ ವಿಶೇಷ ಪೂಜೆ ಸಲ್ಲಿಸಿ ಕೆ.ಎಂ.ದೊಡ್ಡಿಯ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಸಲಾಯಿತು. ಜಿಪಂ ಮಾಜಿ ಸದಸ್ಯ ಸಾದೋಳಲು ಕೃಷ್ಣೇಗೌಡ, ತಾ.ಪಂ.ಮಾಜಿ ಸದಸ್ಯ ದೊಡ್ಡಣ್ಣಯ್ಯ, ಮುಖಂಡರಾದ ಕರತಡಕೆರೆ ಹನುಮಂತೇಗೌಡ, ಡಾಬಾ ಕಿಟ್ಟಿ, ಗೆಜ್ಜಲಗೆರೆ ಲಿಂಗರಾಜು, ಕರಡಕೆರೆ ಸುರೇಂದ್ರ, ಜೆಸಿಬಿ ಶಿವಲಿಂಗೇಗೌಡ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net