

ಹಲಗೂರು: ಸಮೀಪದ ಯತ್ತಂಬಾಡಿ ಕಾಳೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಾ.13 ರಿಂದ ಮಾ.15ರವರೆಗೆ ನಡೆಯಲಿದೆ.
ಮಾ.13 ರಂದು ರಾತ್ರಿ 8ರಿಂದ ಹತ್ತು ಗಂಟೆವರೆಗೆ ವೀರ ಮಕ್ಕಳ ಕುಣಿತ, 10ರಿಂದ ಮದ್ಯರಾತ್ರಿ 2 ಗಂಟೆವರೆಗೆ ಶಿಂಷಾ ನದಿಯಲ್ಲಿ ಹೂ ಹೊಂಬಾಳೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮುಂಜಾನೆ 4 ಗಂಟೆಗೆ ದೇವರ ಮೆರವಣಿಗೆ ಆರಂಭವಾಗಲಿದೆ.
ಮಾ.14 ರಂದು ಬೆಳಗ್ಗೆ 8 ರಿಂದ 10 ಗಂಟೆವರೆಗೆ ಒಲೆಬಂಡಿ ಕಾರ್ಯಕ್ರಮ, ಸಂಜೆ ಮರೆವಣಿಗೆ ಮತ್ತು ದೇವರ ಉತ್ಸವ, ರಾತ್ರಿ ನೈವೇದ್ಯ ಕಾರ್ಯಕ್ರಮ ನಡೆಯಲಿದೆ. ಮಾ.15 ರಂದು ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.
ಸರ್ಕಾರದ ಆದೇಶದಂತೆ ದೇವಾಲಯ ಆವರಣದಲ್ಲಿ ಪ್ರಾಣಿ ಬಲಿ ನಿಷೇಧ ಮಾಡಲಾಗಿದ್ದು, ಭಕ್ತರು ಸಹಕರಿಸಬೇಕೆಂದು ಮಳವಳ್ಳಿ ತಹಸೀಲ್ದಾರ್ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.