

ಇಂಡಿ: ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ಉತ್ತಮ ಶಿಕ್ಷಣ ಪಡೆದು ನಮ್ಮ ರಾಜ್ಯದ ಹೆಸರು ತರುವಂತೆ ಸಾಧಿಸಿ ತೋರಿಸಬೇಕು ಎಂದು ವಿಧಾನಸಭೆ ಅಂದಾಜು ಸಮಿತಿ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿವಿಧ ಚಟುವಟಿಕೆ ಉದ್ಘಾಟನಾ ಸಮಾರಂಭ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೃದಯವಂತಿಕೆಯಿಂದ ನಮ್ಮ ಇಚ್ಛೆಗೆ ಅನುಗುಣವಾದ ಶಿಕ್ಷಣ ಆಯ್ಕೆ ಮಾಡಿಕೊಂಡು ಯಶಸ್ಸು ಸಾಧಿಸಿ ಇತರರಿಗೆ ಮಾದರಿಯಾಗಬೇಕು. ಇತಿಹಾಸ ನಿರ್ಮಾಣ ಮಾಡಲು ನಮ್ಮ ಪ್ರಯತ್ನ ಅವಶ್ಯಕ. ನಾಗರಿಕ ಸಮಾಜದ ಭಾಗವಾಗಿ ಸಮಾಜವಾದಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯರಾದ ರಮೇಶ ಆರ್.ಎಚ್., ಎಸ್.ಎಂ.ಉಪ್ಪಾರ ಹಾಗೂ ಸಂಗಮೇಶ ಹಿರೇಮಠ, ಡಾ.ವಿಜಯಮಹಾಂತೇಶ ದೇವರ, ರವಿಕುಮಾರ ಅರಳಿ, ಎಸ್.ಎಚ್.ಓಲೇಕಾರ ಮಾತನಾಡಿದರು.
ಪ್ರಶಾಂತ ಕಾಳೆ, ಡಾ.ಎಸ್.ಜೆ.ಮಾಡ್ಯಾಳ, ಎಸ್.ಕೆ.ಲಿಂಗದಳ್ಳಿ, ರವಿ ಕಲ್ಲೂರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಜಹಾಂಗೀರ ಸೌದಾಗರ ಇದ್ದರು. ನಂದಕುಮಾರ ಬಿರಾದಾರ ಸ್ವಾಗತಿಸಿದರು.