ರಂಗೋಲಿಯಲ್ಲಿ ಅರಳಿದ ಯಶೋಧೆ, ಕೃಷ್ಣ

Bharati vidya kendr
Published on

ಕಲಬುರಗಿ: ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು. ತಾಯಿ ಮಗುವಿನ ಸಂಬAಧದ ಮಹಿಮೆ ಅಗಾಧವಾದದ್ದು ಎಂದು ಮಾತೃ ಶಕ್ತಿ ಪ್ರಖಂಡದ ಮುಖ್ಯಸ್ಥೆ ಸುಮಂಗಲಾ ಚಕ್ರವರ್ತಿ ಹೇಳಿದರು. ನಗರದ ಹೊರವಲಯದ ಸಿರನೂರದ ಭಾರತೀಯ ವಿದ್ಯಾ ಕೇಂದ್ರ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾತೃ ಸ್ಮತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ತಾಯಿ ತೋರುವ ಪ್ರೀತಿ, ಒಲವು ಅತ್ಯಂತ ಪ್ರೀಯ ಎಂದರು. ಕೈ ತುತ್ತು ಉಣಿಸುವ ಮೂಲಕ ಮಾತೃ ಸ್ಮೃತಿ ಆಚರಿಸಲಾಯಿತು. ಶಾಲೆ ಆವರಣದಲ್ಲಿ ಯಶೋಧರೆಯು ಕೃಷ್ಣನನ್ನು ಎತ್ತಿಕೊಂಡ ಬೃಹತ್ ರಂಗೋಲಿ ಗಮನ ಸೆಳೆಯಿತು. ಸರೋಜಿನಿ ಪಾಟೀಲ್​ ಕಡಗಂಚಿ ಅಧ್ಯಕ್ಷತೆ ವಹಿಸಿದ್ದರು. ರೇವತಿ ಕಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net