

ಮಡಿಕೇರಿ
ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ವಿಶೇಷ ರಾಯಭಾರಿಯಾಗಿ ಪಾಲ್ಗೊಳಲು ಮೂರ್ನಾಡುವಿನ ಯಶಸ್ ರೈ ಆಯ್ಕೆ ಆಗಿದ್ದಾರೆ. ಜಿಲ್ಲೆಯ ಮೂರ್ನಾಡು ಕೊಡಂಬೂರುವಿನ ಇವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ದೇಶದ ಪ್ರತಿ ರಾಜ್ಯದಿಂದ 15 ರಿಂದ 28 ವರ್ಷ ವಯೋಮಿತಿ ವರೆಗಿನ ಅವಕಾಶದಲ್ಲಿ ರಾಜ್ಯದಿಂದ ಈ ಬಾರಿ ಕೊಡಗು ಈ ಸ್ಥಾನ ಪಡೆದುಕೊಂಡಿದೆ.
ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ, ನೆಹರು ಯುವಕೇಂದ್ರದ ಮೈ ಭಾರತ್ ಪೋರ್ಟಲ್ ಮೂಲಕ ನೋಂದಣಿಗೊAಡ ಯುವಕರಲ್ಲಿ ಯಶಸ್ ರೈ ಆಯ್ಕೆ ಆಗಿದ್ದಾರೆ.
ಇವರು ಸುಳ್ಳ ಕೆ.ವಿ.ಜಿ. ಎಂಜಿಯರಿAಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳ ಈ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ಮತ್ತು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಇವರು ಯುವ ಸಮೂಹ ಜಿಲ್ಲಾ ಯುವ ಒಕ್ಕೂಟ ಮುಖಾಂತಾರ ರಾಷ್ಟç ಯುವಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಡಗನ್ನು ಪ್ರತಿನಿಧಿಸಿದ್ದರು ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ. ಸುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಶಸ್ ರೈ ಅವರು ಬಿ.ಎನ್. ಲವಕುಮಾರ್ ಮತ್ತು ಬಿ.ಬಿ. ಜಯಂತಿ ಅವರ ಪುತ್ರ.