ಮ್ಯಾಗ್ನಸ್ ನಿಯೋ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಅನಾವರಣ

22 Jaggu 10
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಬೆಳಗಾವಿಯ ಕಾಲೇಜು ರಸ್ತೆಯ ಶೋ ರೂಂನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಯಶ್ ಸ್ಕೂಟರ್ಸ್ ವತಿಯಿಂದ ಗ್ರೀವ್ಸ್ ಇಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯ ಮ್ಯಾಗ್ನಸ್ ನಿಯೋ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಅನಾವರಣಗೊಳಿಸಲಾಯಿತು. ಮೇಡ್ ಇನ್ ಇಂಡಿಯಾ ಮತ್ತು ಡೆಸೈನ್ಡ್ ಇನ್ ಇಂಡಿಯಾ ಪರಿಸರ ಸ್ನೇಹಿ ದ್ವಿಚಕ್ರ ವಾಹನ ಎಲ್ಲರ ಗಮನ ಸೆಳೆಯಿತು. 75,000 ಕಿ.ಮೀ ಅಥವಾ 5 ವರ್ಷಗಳ ವಾರಂಟಿ ನೀಡುವ ಏಕೈಕ ಇವಿ ದ್ವಿಚಕ್ರ ವಾಹನ ಇದಾಗಿದೆ.

ಮ್ಯಾಗ್ನಸ್ ನಿಯೋದ ಪ್ರಮುಖ ವೈಶಿಷ್ಟ್ಯಗಳು: ಮ್ಯಾಗ್ನಸ್ ನಿಯೋ ಬಿಎಲ್ಡಿಸಿ ಮೋಟಾರ್ ಸಹಿತ 2.3 ಕಿಲೋವ್ಯಾಟ್ ಎಲ್ಎಫ್‌ಪಿ ಬ್ಯಾಟರಿ ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ 118 ಕಿಮೀ ಮೈಲೇಜ್ ನೀಡುತ್ತದೆ. 65 ಕಿ.ಮೀ ಗಂಟೆಗೆ ಗರಿಷ್ಠ ವೇಗದಲ್ಲಿ ಚಲಾಯಿಸಬಹುದು. ಸ್ಥಿರತೆಗಾಗಿ 12-ಇಂಚಿನ ಟೈರ್ ಸಹ ಇವೆ. ಇದು ನಗರ ಪ್ರಯಾಣಕ್ಕೆ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಆಯ್ಕೆಯಾಗಿದೆ.

ಅತಿಥಿಯಾಗಿ ಆಗಮಿಸಿದ್ದ ಮಹೇಶ ಅನಗೋಳಕರ ಮಾತನಾಡಿ, ಮ್ಯಾಗ್ನಸ್ ನಿಯೋ ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ಹೆಚ್ಚುತ್ತಿರುವ ಬೇಡಿಕೆಗೆ ಉತ್ಕೃಷ್ಟ ಉದಾಹರಣೆಯಾಗಿದೆ. ಹೆಚ್ಚುತ್ತಿರುವ ಇಂಧನದ ಬೆಲೆ ಭಾರ ತಗ್ಗಿಸುವುದಕ್ಕೆ ಮತ್ತು ಪರಿಸರ ಕಾಳಜಿಗಾಗಿ ಮ್ಯಾಗ್ನಸ್ ನಿಯೋದಂತಹ ಇಲೆಕ್ಟ್ರಿಕ್ ಸ್ಕೂಟರ್‌ಗಳು ನಗರ ಸಾರಿಗೆಗೆ ಮತ್ತು ವಾಯು ಮಾಲಿನ್ಯ ಸಮಸ್ಯೆಯ ಪರಿಹಾರಕ್ಕಾಗಿ ಉತ್ತಮ ಆಯ್ಕೆಯಾಗಿದೆ ಎಂದರು.

ಯಶ್ ಆಟೋ ಮಾಲೀಕ ಸಂಜಯ ಮೋರೆ, ಡಿ.ಬಿ. ಪಾಟೀಲ, ಎಂ.ವೈ. ಘಾಡಿ ವೇದಿಕೆಯಲ್ಲಿದ್ದರು. ಸ್ಮಿತಲ ತರಳೆ ಮ್ಯಾಗ್ನಸ್ ನಿಯೋ ಇ-ಸ್ಕೂಟರ್‌ನ ಮೊದಲ ಗ್ರಾಹಕರಾಗಿದ್ದಾರೆ. ನಾಗೇಶ ದೇಗಸ್ಕರ, ಸಂದೀಪ ತರಳೆ , ವಿನಾಯಕ ಮೋರೆ, ಅಜಿತ್ ಮೋರೆ, ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net