ಯರಗಟ್ಟಿ ವಿದ್ಯುತ್​ ಕೇಂದ್ರಕ್ಕೆ ಮುತ್ತಿಗೆ

17yaragatti1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
Published on

ಯರಗಟ್ಟಿ: ತಾಲೂಕಿನ ಕೋಟೂರು&ಶಿವಾಪುರ ಗ್ರಾಮದಲ್ಲಿ 110 ಕೆವಿ ವಿದ್ಯುತ್​ ಪ್ರಸರಣ ಕೇಂದ್ರ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ವಿದ್ಯುತ್​ ಇಲ್ಲದೆ ಬೆಳೆಗಳು ಹಾಳಾಗುತ್ತಿವೆ ಎಂದು ಕಡಬಿ ಹಾಗೂ ಶಿವಾಪುರ ರೈತರು ಯರಗಟ್ಟಿ ವಿದ್ಯುತ್​ ಪ್ರಸರಣ ಕೇಂದ್ರಕ್ಕೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮೂರು ವರ್ಷಗಳ ಹಿಂದೆ ವಿದ್ಯುತ್​ ಕೇಂದ್ರ ಕಾಮಗಾರಿ ಪ್ರಾರಂಭವಾಗಿದ್ದು, ಗುತ್ತಿಗೆದಾರ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಮತ್ತೆ ಆರಂಭಿಸುವಂತೆ ಮನವಿ ಪ್ರತಿಭಟಿಸಿದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಈಗ ಕೊಳವೆಬಾವಿಗಳಿಂದ ಬೆಳೆಗೆ ನೀರುಣಿಸಲು ವಿದ್ಯುತ್​ ಸಾಕಾಗದೆ ಪರದಾಡುವಂತಾಗಿದೆ ಎಂದು ರೈತರು ಸಮಸ್ಯೆ ಹೇಳಿಕೊಂಡರು.

ಕೃಷಿಕ ಸಮಾಜದ ಯುವ ಟಕದ ರಾಜ್ಯಾಧ್ಯ ಮಹಾಂತೇಶ ತೋಟಗಿ ಮಾತನಾಡಿ, ಶ್ರೀ ಕಾಮಗಾರಿ ಪ್ರಾರಂಭಿಸದಿದರೆ ಯರಗಟ್ಟಿ ರಸ್ತೆ ಬಂದ್​ ಮಾಡಲಾಗುವುದು ಎಂದರು.

ಸ್ಥಳಕ್ಕೆ ಭೇಟಿ ನೀಡಿದ ಕೆಪಿಟಿಸಿಎಲ್​ ಅಧಿಕಾರಿಗಳು ಮಾತನಾಡಿ, ಗುತ್ತಿಗೆದಾರ ಅರ್ಧಕ್ಕೆ ಕೆಲಸ ಬಿಟ್ಟಿದ್ದರಿಂದ, ತಾಂತ್ರಿಕ ತೊಂದರೆಯಿಂದ ಮತ್ತೆ ಟೆಂಡರ್​ ಕರೆದಿಲ್ಲ. ಮುಂಬರುವ ೆಬ್ರವರಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ವಿದ್ಯುತ್​ ಕೇಂದ್ರ ಆರಂಭಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದರು.

ರೆತ ಸಂದ ಮಾಣಿಕ್ಯ ಚಿಲ್ಲೂರ, ಹನಮಂತ ಉಳ್ಳಾಗಡ್ಡಿ, ರೈತರಾದ ಅಶೋಕ ಹುಂಡೇಕರ, ಮಹಾವೀರ ಹುಕ್ಕೇರಿ, ಶ್ರೀಧರ ಉದಗಟ್ಟಿ, ತವನಪ್ಪ ಇಂಡಿ, ಮಲ್ಲಿಕಾರ್ಜುನ ಅಂಗಡಿ, ಈರಪ್ಪ ಲಟ್ಟಿ, ಚಿದಾನಂದ ಹಮ್ಮನ್ನವರ, ಭೀಮಶಿ ಮಾಳಕ್ಕನವರ, ಸೆದುಸಾಬ್​ ಸನದಿ, ಬಾಳಪ್ಪ ಬಾಗೇವಾಡಿ, ಮಹಾದೇವ ಮಾಳೆನವರ, ಸೋಮು ರೈನಾಪುರ, ವಿಠ್ಠಲ ರೆಬ್ಬನ್ನವರ, ರಾಮಚಂದ್ರ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net