ಬಸ್ ಸಮಸ್ಯೆ ಪ್ರಯಾಣಿಕರಿಗೆ ಸಂಕಷ್ಟ

Untitled design (9)
ಯರಡೋಣಾ ಕ್ರಾಸಿನ ಬಸ್ ಶೆಲ್ಟರ್‌ನಲ್ಲಿ ಕಾದು ಕುಳಿತ ಪ್ರಯಾಣಿಕರು.
Published on

ಹಟ್ಟಿಚಿನ್ನದಗಣಿ: ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ(150ಎ)ಯಲ್ಲಿ ಬರುವ ಸಮೀಪದ ಯರಡೋಣಾ ಕ್ರಾಸ್‌ನಲ್ಲಿ ಸಾರಿಗೆಯ ಎಕ್ಸ್‌ಪ್ರೆಸ್ ಬಸ್‌ಗಳನ್ನು ನಿಲುಗಡೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾರಿಗೆಯ ಎಕ್ಸ್‌ಪ್ರೆಸ್ ಬಸ್‌ ಸಮಸ್ಯೆ

ಹಟ್ಟಿಭಾಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯರಡೋಣಾ ಕ್ರಾಸ್‌ನಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲು ಎನ್‌ಈಕೆಆರ್‌ಟಿಸಿ ಎಂಡಿ 6 ವರ್ಷಗಳ ಹಿಂದೆ ಆದೇಶ ಹೊರಡಿಸಿದ್ದರು. ಅದು ಶಾಸಕ ಮಾನಪ್ಪ ಡಿ.ವಜ್ಜಲ್‌ರ ಪ್ರಯತ್ನದಿಂದ ಆದೇಶವಾಗಲು ಸಾಧ್ಯವಾಗಿತ್ತು. ಆದರೂ ಈಗ ಕೆಲ ಬಸ್‌ಗಳನ್ನು ನಿಲ್ಲಿಸದೆ ಸಂಚಾರ ಮಾಡುತ್ತಿವೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಎದುರಿಸುವಂತಾಗಿದೆ.

ಶಿವಮೊಗ್ಗ, ಕಲಬುರ್ಗಿ, ಬೀದರ್, ಹುಬ್ಬಳ್ಳಿ, ಇಲಕಲ್, ಬಳ್ಳಾರಿ, ಗದಗ, ಧರ್ಮಸ್ಥಳ, ವಿಜಯಪುರ ಸೇರಿ ದೂರದ ನಗರಗಳಿಗೆ ತೆರಳು ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಾತ್ರಿ 9.30ಕ್ಕೆ ಹುಬ್ಬಳ್ಳಿ-ಹಟ್ಟಿ ಬಸ್ ಸೌಲಭ್ಯವಿದೆ. ತದನಂತರ ಯಾವುದೇ ಬಸ್‌ಗಳು ಸಂಚರಿಸುತ್ತಿಲ್ಲ. ಬೆಳಗಿನ ಜಾವ 5ಕ್ಕೆ ಬೆಂಗಳೂರು-ಹಟ್ಟಿ ಬಸ್ ಸಂಚರಿಸಲಿದೆ. ದಿನದಲ್ಲಿ ಹಾಗೂ ರಾತ್ರಿಯಲ್ಲಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net