

ಹೆಬ್ರಿ: ಈ ನೆಲದ ಶ್ರೀಮಂತ ಕೃಷಿ ಸಂಸ್ಕೃತಿ ಉಳಿಸುವತ್ತ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದು ಹೆಬ್ರಿ ತಾಲೂಕು ನವಜಾಗೃತಿ ಸಮಿತಿ ಅಧ್ಯಕ್ಷ ನೀರೆ ಕೃಷ್ಣಶೆಟ್ಟಿ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಹೆಬ್ರಿ ತಾಲೂಕು, ಯಂತ್ರಶ್ರೀ ನಾಟಿ ಕಾರ್ಯಕ್ಕೆ ಕೃಷಿಕ ಎಲ್ಲಿಕೊಡ್ಲು ಭೋಜ ಶೆಟ್ಟಿ ಮನೆ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದರು.
ಬೊಗ್ಗಿ ಕುಲಾಲ್ ಪಾಡ್ದನ ಮೂಲಕ ಚಾಲನೆ ನೀಡಿದರು. ಬೆಳ್ತಂಗಡಿ ಕೇಂದ್ರ ಕಚೇರಿ ಕೃಷಿ ಯೋಜನೆ ಅಧಿಕಾರಿ ಸುಧೀರ್ ಜೈನ್, ಶಿವಪುರ ಗ್ರಾಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಉಪಾಧ್ಯಕ್ಷ ಶಂಕರ ಬಡ್ಕಿಲಾಯ, ಹೆಬ್ರಿ ಯೋಜನಾಧಿಕಾರಿ ಲೀಲಾವತಿ, ಪ್ರಮುಖರಾದ ಸುರೇಶ್ ಶೆಟ್ಟಿ ಶಿವಪುರ, ರಮೇಶ್ ಪೂಜಾರಿ, ಮೋಹನ್‌ದಾಸ್ ನಾಯಕ್, ಚಾರ ವಲಯ ಅಧ್ಯಕ್ಷೆ ಜ್ಯೋತಿ, ಕೃಷಿ ಮೇಲ್ವಿಚಾರಕ ಉಮೇಶ್, ಮೇಲ್ವಿಚಾರಕಿ ರೇವತಿ, ಕೃಷಿಕ ಭೋಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮೇಲ್ವಿಚಾರಕ ಉಮೇಶ್ ನಿರೂಪಿಸಿದರು. ಮೇಲ್ವಿಚಾರಕಿ ರೇವತಿ ಸ್ವಾಗತಿಸಿದರು.
ಭತ್ತದ ಬೆಳೆಗೆ ಅನೇಕ ಸಮಸ್ಯೆಗಳಿವೆ. ತುತ್ತು ಕೂಳಿಗೆ ಮುಂದಿನ ದಿನಗಳಲ್ಲಿ ಆಹಾಕಾರ ಪಡುವ ಪರಿಸ್ಥಿತಿ ಬರಬಹುದು. ಈ ಭಾಗದ ಪ್ರಜ್ಞಾವಂತರೆಲ್ಲ ನಿರಂತರವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು.-ಸುಧೀರ್ ಜೈನ್ ಕೃಷಿ ಯೋಜನೆ ಅಧಿಕಾರಿ