ಯಂಕಂಚಿ ದಾವಲ ಮಲೀಕ ಜಾತ್ರೆ ನಾಳೆಯಿಂದ

Yankanchi Dawala Malika Jatre from tomorrow
Yankanchi Dawala Malika Jatre from tomorrow
Published on

ಬ್ರಹ್ಮದೇವನಮಡು : ಮುಸ್ಲಿಂ ದೇವರಿಗೆ ಹಿಂದು ಪೂಜಾರಿ ಪೂಜೆ ಸಲ್ಲಿಸುವ ಭಾವೈಕ್ಯದ ಸಂಕೇತವಾಗಿರುವ ಸಿಂದಗಿ ತಾಲೂಕಿನ ಯಂಕಂಚಿಯಲ್ಲಿ ದಾವಲಮಲೀಕ ಜಾತ್ರೆ ವೈಭವದಿಂದ ಜರುಗಲಿದೆ.ದಾವಲ ಮಲೀಕ ಸೂಫಿ ಸಂತನ ಭಕ್ತರು ರಾಜ್ಯ, ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಇದ್ದಾರೆ.

ಜಾತ್ರೆ ನಿಮಿತ್ತ ೆ.2 ರಂದು ಮುಜಾವರ ಮನೆಯಿಂದ ದೇವರ ಪಲ್ಲಕ್ಕಿ ಉತ್ಸವ ರಾತ್ರಿ1ಕ್ಕೆ ಹೊರಟು ಬೆಳಗ್ಗೆ 3.15ಕ್ಕೆ ದೇವಸ್ಥಾನಕ್ಕೆ ತಲಪುವುದು. ನಂತರ ಬೆಳಗ್ಗೆ 4ಕ್ಕೆ ಗಂಧೋತ್ಸವ ನಡೆಯಲಿದೆ.

ೆ.3 ರಂದು ದೀಪೋತ್ಸವ, ರಾತ್ರಿ 9ಕ್ಕೆ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ. ೆ.4 ರಂದು ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದೇ ಬೆಳಗ್ಗೆ 10ಕ್ಕೆ ಭಾರ ಎತ್ತುವ ಸ್ಪರ್ಧೆ, 5 ರಂದು ಕುಸ್ತಿ ಪಂದ್ಯ ನಡೆಯಲಿದೆ. ೆ.6 ರಂದು ರಾತ್ರಿ 10ಕ್ಕೆ ದೇವಸ್ಥಾನದಿಂದ ದೇವರ ಪಲ್ಲಕ್ಕಿ ಉತ್ಸವ ಹೊರಟು ರಾತಿ ್ರ1.30ಕ್ಕೆ ಮುಜಾವರ ಮನೆಗೆ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net