ಯಮುನಾಗೆ ಪಿಎಚ್.ಡಿ ಪ್ರದಾನ

17-YLP-1 YAMUNA
Published on

ಯಲ್ಲಾಪುರ: ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜುಕೇಷನ್, ಮಣಿಪಾಲ ವಿಶ್ವವಿದ್ಯಾಲಯವು ಹೆಗ್ಗಾರ ಜಪದಮನೆಯ ಯಮುನಾ ಭಾಗ್ವತ್ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.

ಇನ್ವೆಸ್ಟಿಗೇಷನ್ ಆಫ್ ಪ್ಲೆಕ್ಷರಲ್ ಸ್ಟ್ರೆಂತ್ ಆನ್ ಕರೋಡೆಡ್ ಪ್ರಿಸ್ಟ್ರೆಸ್ಡ್ ಸೆಲ್ಪ್ ಕಾಂಪ್ಯಾಂಕ್ಟಿಂಗ್ ಕಾಂಕ್ರೀಟ್ ಬೀಮ್ ಎನ್ನುವ ಸಂಶೋಧನಾ ಪ್ರಬಂಧಕ್ಕೆ ಪಿಎಚ್. ಡಿ ಪ್ರದಾನ ಮಾಡಿದೆ. ಇವರು ಎಂಐಟಿ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಗೋಪಿನಾಥ ನಾಯಕ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಹೆಗ್ಗಾರ್ ಕೃಷ್ಣ ಭಾಗ್ವತ ಜಪದಮನೆ ಮತ್ತು ಸರೋಜಿನಿ ದಂಪತಿಯ ಪುತ್ರಿ. ಡಾ. ರಾಧಾಕೃಷ್ಣ ಭಟ್ಟ ಹುಲಗಾನ ಅವರ ಪತ್ನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net