ರಸ್ತೆ ಡಾಂಬರೀಕರಣಕ್ಕೆ ಅನುದಾನ ನೀಡಿ

25-YLP-MANAVI
Published on

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಲಗಾರ ರಸ್ತೆ ಕಾಮಗಾರಿ ಕಳಪೆಯಾಗಿದೆ. ಅದನ್ನು ಸರಿಯಾಗಿ ಮಾಡಿಸಿಕೊಡಬೇಕು. ಬಾಕಿ ಉಳಿದ ರಸ್ತೆಯ ಡಾಂಬರೀಕರಣಕ್ಕೆ ಅನುದಾನ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿದರು. ಈಗಾಗಲೇ 90 ಲಕ್ಷ ರೂ. ವೆಚ್ಚದಲ್ಲಿ 2.5 ಕಿ.ಮೀ. ರಸ್ತೆ ಕಾಮಗಾರಿ ಆಗಿದ್ದು, ಅದು ಕಳಪೆಯಾಗಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ದೂರಲಾಗಿದೆ. ಗುತ್ತಿಗೆದಾರರಿಗೆ ಬಿಲ್ ತಡೆ ಹಿಡಿಯುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಮಳೆಗಾಲದ ನಂತರ ಮತ್ತೊಮ್ಮೆ ಡಾಂಬರೀಕರಣದ ಭರವಸೆ ನೀಡಿದ್ದಾರೆ. ಸೂಳಗಾರ ಕ್ರಾಸ್‌ವರೆಗೆ ಮಾತ್ರ ರಸ್ತೆ ದುರಸ್ತಿ ಆಗಿದ್ದು, ಮುಂದೆ ಅಣಲಗಾರವರೆಗೆ ಡಾಂಬರೀಕರಣಕ್ಕೆ ಅನುದಾನ ನೀಡಬೇಕು. ನಾಳಶೇರ ರಸ್ತೆಯ ದುರಸ್ತಿಗೂ ಅನುದಾನ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹೆಬ್ಬಾರ, ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ಬಿಲ್ ತಡೆ ಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಮಳೆಗಾಲದ ನಂತರ ರಸ್ತೆ ಕಾಮಗಾರಿಗೆ ಅಗತ್ಯ ಅನುದಾನ ಮಂಜೂರಿ ಮಾಡುವುದಾಗಿ ಭರವಸೆ ನೀಡಿದರು. ನಂದೊಳ್ಳಿ ಗ್ರಾಪಂ ಮಾಜಿ ಸದಸ್ಯ ನಾರಾಯಣ ಭಟ್ಟ ಭಟ್ರಕೇರಿ, ಗ್ರಾಮಸ್ಥರಾದ ಸೀತಾರಾಮ ಭಟ್ಟ ತೆಂಗಿನಜಡ್ಡಿ, ಬಾಲಚಂದ್ರ ಭಟ್ಟ ಭಟ್ರಕೇರಿ, ಸುಬ್ರಹ್ಮಣ್ಯ ಭಾಗ್ವತ ಗುಡ್ನಮನೆ, ಶ್ರೀಧರ ಭಟ್ಟ ವೈದಿಕರಮನೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net