ಯಲ್ಲಾಪುರದಲ್ಲಿ ಮಳೆ ಚುರುಕು

judge-visit
Published on

ಯಲ್ಲಾಪುರ: ತಾಲೂಕಿನಲ್ಲಿ ಭಾನುವಾರ ಮಳೆ ಮತ್ತೆ ಚುರುಕುಗೊಂಡಿದ್ದು, ಬಿಟ್ಟು ಬಿಟ್ಟು ಜೋರಾಗಿ ಮಳೆ ಸುರಿಯಿತು. 

ಜೋರಾದ ಮಳೆ, ಗಾಳಿಯಿಂದ ಬೆಲ್ ರಸ್ತೆಯಲ್ಲಿ ನಡೆಯುವ ವಾರದ ಸಂತೆಯಲ್ಲಿ ವ್ಯಾಪಾರಸ್ಥರು, ಗ್ರಾಹಕರು ಪರದಾಡುವಂತಾಯಿತು. ಗಟಾರದ ನೀರು ತುಂಬಿ ರಸ್ತೆಯ ಮೇಲಿನ ತರಕಾರಿ ಅಂಗಡಿಗಳತ್ತ ನುಗ್ಗಿ ಸಮಸ್ಯೆ ಉಂಟಾಯಿತು.

ಗ್ರಾಮೀಣ ಭಾಗದ ಹಲವೆಡೆ ವಿದ್ಯುತ್ ವ್ಯತ್ಯಯ ಮುಂದುವರಿದಿದ್ದು, ಮಳೆ-ಗಾಳಿಗೆ ತುಂಡಾಗಿ ಬೀಳುವ ವಿದ್ಯುತ್ ಕಂಬ, ಲೈನ್ ಗಳನ್ನು ಸರಿಪಡಿಸಲು ಹೆಸ್ಕಾಂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. 

ಮಾಗೋಡ ಸಮೀಪ ಮೊಟ್ಟೆಗದ್ದೆ ಕ್ರಾಸ್ ಬಳಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು, ಲೈನ್ ಹಾಗೂ ಕಂಬ ಮುರಿದು ಬಿದ್ದಿದೆ. ಸ್ಥಳೀಯರು ಮರವನ್ನು ತೆರವುಗೊಳಿಸಿದರು.

 ಸಿವಿಲ್ ನ್ಯಾಯಾಧೀಶೆ ಭೇಟಿ

 ತಾಲೂಕಿನ ನಂದೊಳ್ಳಿ ಹಾಗೂ ಚಂದಗುಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿವಿಲ್ ನ್ಯಾಯಾಧಿಶರಾದ ಲಕ್ಷ್ಮೀಬಾಯಿ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.  ಮಾಗೋಡ ಜಲಪಾತದ ರಸ್ತೆ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯಲ್ಲಿ ಸಂಚಾರ ನಿಷೇಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಜಂಬೆಸಾಲಿನಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿತವಾದ ಸ್ಥಳಕ್ಕೂ ಭೇಟಿ ನೀಡಿದರು. ತಹಸೀಲ್ದಾರ ಅಶೋಕ ಭಟ್ಟ, ಜಿ.ಪಂ ಎಇಇ ಅಶೋಕ ಬಂಟ, ಪಿಎಸ್ಐ ಸಿದ್ದಪ್ಪ ಗುಡಿ, ಪಿಡಿಒ ರಾಜೇಶ ಶೇಟ್ ಇತರರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net