ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿಯಾಗಿ ಚಾಲಕ ಸಾವು

22-ylp bus acident
Published on

ಯಲ್ಲಾಪುರ: ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟು, 24 ಪ್ರಯಾಣಿಕರು ಗಾಯಗೊಂಡ ಘಟನೆ ಪಟ್ಟಣದ ಹಳಿಯಾಳ ಕ್ರಾಸ್ ಬಳಿ ಶನಿವಾರ ಸಂಭವಿಸಿದೆ.
ಮಂಡ್ಯದ ಮಾದಾಪುರಕೊಪ್ಪಲಿನ ಕಿರಣಕುಮಾರ ಎಂ.ಡಿ. (26) ಮೃತಪಟ್ಟ ಚಾಲಕ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಂಡ್ಯದ ಪಾಂಡವಪುರದ ರಾಜು ಚೆಲುವರಾಜ, ತುಮಕೂರು ಜಿಲ್ಲೆ ಶಿರಾದ ಗಿರೀಶ ಗೌಡ, ಶ್ರೀಧರ ಸದಾಶಿವಯ್ಯ, ಕೊಲ್ಕತ್ತದ ಸರಬಾನು ತಪನನಾಥ, ಕೇರಳ ರಾಜ್ಯದ ಕಾಕನಾಡಿನ ಅಫ್ತಾಬ್ ಮಂಜೂರ, ಫಾತಿಮಾ ನಿಸಾರ, ಬೆಂಗಳೂರಿನ ಬುದ್ಧಿಗೇರಿ ಕ್ರಾಸ್‌ನ ತವಮಣಿರಾಜು, ವಿವಂತಿಕಾ ತವಮಣಿರಾಜು, ಬೆಂಗಳೂರಿನ ಹಂಸಲಕ್ಷ್ಮೀ, ಪಾಂಡುರಾಜ ಪರಮಶಿವನ್, ಮಸ್ಕೂಬ್ ಅಹ್ಮದ್, ವಿಶಾಲ ಜೈನ, ಓಂಕಾರ ಪರಂಜಪೆ, ಲೋಕನಾಥ ಎನ್., ದೇವವ್ರತ ಕುಲಕರ್ಣಿ, ಋತುಜಾ ತೂಪೆ, ಶ್ರದ್ಧಾ ಸಹಾಲಿ, ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಕಪಿಲ ತೆಲಸಂಗಾ, ಸಿದ್ದಪ್ಪ ಮನಗುಳಿ, ಪಣಜಿಯ ಸಿಕ್ವೆರಿಯಾ ಜೋಸ್, ತುಮಕೂರಿನ ವಿನಯ ರಾಜಣ್ಣ, ಮಂಜುನಾಥ ವೈ.ಕೆ., ಆಸ್ಸಾಂ ರಾಜ್ಯದ ಗುವಾಹಟಿಯ ಸೌರವ ರವೀಂದ್ರನಾಥ ಸರ್ಕಾರ್, ಕೋಲಾರದ ಇತೇಶ ಶ್ರೀನಿವಾಸ ಗಾಯಗೊಂಡವರು. ಬೆಂಗಳೂರಿನಿಂದ ಗೋವಾಕ್ಕೆ ಹೋಗುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಸಂಪೂರ್ಣ ಜಖಂಗೊಂಡಿದೆ.
ಬಸ್‌ನಲ್ಲಿ ಇಬ್ಬರು ಚಾಲಕರು ಸೇರಿ 33 ಜನ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net