ಸಂತ್ರಸ್ತರಿಗೆ ಸರ್ಕಾರದ ಪರಿಹಾರಧನ ವಿತರಣೆ

26-ylp- parihar vitarane
Published on

ಯಲ್ಲಾಪುರ: ತಾಲೂಕಿನಲ್ಲಿ ಮಳೆಯಿಂದಾಗಿ ಮನೆ ಹಾನಿ ಹಾಗೂ ಜಾನುವಾರುಗಳನ್ನು ಕಳೆದುಕೊಂಡ 7 ಜನರಿಗೆ ಶಾಸಕರ ಕಾರ್ಯಾಲಯದಲ್ಲಿ ಸರ್ಕಾರದ ಪರಿಹಾರಧನದ ಆದೇಶ ಪತ್ರವನ್ನು ಶಾಸಕ ಶಿವರಾಮ ಹೆಬ್ಬಾರ್ ಬುಧವಾರ ಹಸ್ತಾಂತರಿಸಿದರು.
ವಾಸ್ತವ್ಯದ ಮನೆ ಕುಸಿದು ಹಾನಿಯಾದ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ತಾರೇಹಳ್ಳಿಯ ಗೀತಾ ಸಿದ್ದಿ ಅವರಿಗೆ 1.20 ಲಕ್ಷ ರೂಪಾಯಿ ಪರಿಹಾರ ಹಾಗೂ ಜಾನುವಾರುಗಳನ್ನು ಕಳೆದುಕೊಂಡ ಡೋಮಗೇರಿ ಗ್ರಾಮದ ಮಾಳು ಕೊಕರೆ, ಗೋಯಾ ಕೊಕರೆ, ಬಾಳು ಕೊಕರೆ, ಸಹಸ್ರಳ್ಳಿ ಗ್ರಾಮದ ವೆಂಕಟರಮಣ ಭಟ್, ಕಂಚಿನಳ್ಳಿ ಗ್ರಾಮದ ಜಿಮ್ಮು ಶಿಂಧೆ ಅವರಿಗೆ ತಲಾ 37,500 ರೂಪಾಯಿ, ಚಿಮಣಿಮಾಳ ಗ್ರಾಮದ ವಿಠ್ಠು ಜಂಗ್ಲೆ ಅವರಿಗೆ 75,000 ರೂ. ಪರಿಹಾರ ಧನದ ಆದೇಶ ಪತ್ರವನ್ನು ಶಾಸಕರು ಹಸ್ತಾಂತರಿಸಿದರು. ಗ್ರೇಡ್-2 ತಹಸೀಲ್ದಾರ್ ಸಿ.ಜಿ. ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net