

ಯಲ್ಲಾಪುರ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರು ಬುಧವಾರ ಮೌನ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವ್ಕಾರ, ಪ್ರಮುಖರಾದ ವಿ.ಎಸ್. ಭಟ್ಟ, ಟಿ.ಸಿ. ಗಾಂವ್ಕಾರ, ಪ್ರಶಾಂತ ಸಭಾಹಿತ, ಎನ್.ಕೆ. ಭಟ್ಟ ಮೆಣಸುಪಾಲ, ಅನಿಲ ನಾಯ್ಕ ಚಿನ್ನಾಪುರ, ರವಿಚಂದ್ರ ನಾಯ್ಕ, ಎಂ.ಡಿ. ಮುಲ್ಲಾ, ಎಸ್.ಎ. ಬ್ಯಾರಿ, ಸರಸ್ವತಿ ಗುನಗಾ, ಎನ್.ಎನ್. ಹೆಬ್ಬಾರ, ಲಾರೆನ್ಸ್ ಸಿದ್ದಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.