ಜನತಾ ಕರ್ಫ್ಯೂಗೆ ಬೆಂಬಲ

0102
Published on

ಉಗರಗೋಳ: ಕರೋನಾ ಸುಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ಗ್ರಾಮೀಣ ಪ್ರದೇಶದ ಜನತೆಯಿಂದ ಉತ್ತಮ ಬೆಂಬಲ ವ್ಯಕ್ತವಾಯಿತು. ಸದಾ ಹೊಲಗದ್ದೆಗಳಲ್ಲಿ ಇರುತ್ತಿದ್ದ ರೈತಾಪಿ ಜನರು ಮನೆಗಳಲ್ಲಿ ಕಾಲ ಕಳೆದರು.

ಭಕ್ತರಿಂದ ತುಂಬಿ ತುಳುಕುತ್ತಿದ್ದ ಕ್ಷೇತ್ರ ಯಲ್ಲಮ್ಮನಗುಡ್ಡ ಭಕ್ತರಿಲ್ಲದೆ ಬಿಕೋ ಎನ್ನುತ್ತಿತ್ತು. ಯಲ್ಲಮ್ಮನಗುಡ್ಡ, ಉಗರಗೋಳ, ಹಿರೇಕುಂಬಿ, ಚುಳಕಿ, ಚಿಕ್ಕುಂಬಿ, ಹಂಚಿನಾಳ, ಆಚಮಟ್ಟಿ ಭಾಗಗಳಲ್ಲಿ ವಾಹನ ಸಂಚಾರ ಹಾಗೂ ಜನಸಂದಣಿ ಕಂಡುಬರಲಿಲ್ಲ.

ಜನರು ಕೂಡ ಮನೆ ಬಿಟ್ಟು ಹೊರಗೆ ಬರಲಿಲ್ಲ. ಕರೊನಾ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು ಸೇರಿ ಎಲ್ಲ ಇಲಾಖೆಯ ಸಿಬ್ಬಂದಿ ಸೇವೆಯನ್ನು ಜನರು ಶ್ಲಾಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net