

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಭೂಸಪ್ಪ ಚೌಕ್ ಬಳಿಯ ಕುರುಬರ ಓಣಿಯ ಶ್ರೀ ಯಲ್ಲಮ್ಮದೇವಿ ಹಾಗೂ ಬೀರಲಿಂಗೇಶ್ವರ ಮತ್ತು ವಿಠ್ಠಲ ರುಕ್ಮಿಣಿ ದೇವರ ಜಾತ್ರಾ ಮಹೋತ್ಸವವು ಮೇ 16ರಿಂದ 18ರವರೆಗೆ ಜರುಗಲಿದೆ. 16ರಂದು ಎಲ್ಲ ದೇವರಿಗೆ ದೀಪ ಕೊಡುವುದು, ರಾತ್ರಿ8ಕ್ಕೆ ವಿಠ್ಠಲ- ರುಕ್ಮಿಣಿಯರ ಪೋತಿ ಸ್ಥಾಪನೆ, ಹರಿ ಭಕ್ತರಿಂದ ಕೀರ್ತನೆ ಮತ್ತು ಭಜನೆ ನಡೆಯಲಿದೆ. 17ರಂದು ಬೆಳಗ್ಗೆ 5 ಗಂಟೆಗೆ ಮಹಾರುದ್ರಾಭಿಷೇಕ ಮತ್ತು ಬ್ರಹ್ಮದೇವರ ಪೂಜೆ, ಸಂಜೆ ಡೊಳ್ಳಿನ ಮಜಲು ಡೊಳ್ಳಿನ ಪದಗಳ ಗಾಯನ ಜರುಗಲಿದೆ. 18ರಂದು ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಮಂಗಲವಾದ್ಯ ವೈಭವದೊಂದಿಗೆ ಶ್ರೀ ಯಲ್ಲಮ್ಮ, ಬೀರಲಿಂಗೇಶ್ವರ ದೇವಲ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಲಿದೆ. ರಾತ್ರಿ ಡೊಳ್ಳಿನ ಪದಗಳು ಪ್ರಸ್ತುತಿ ಇರಲಿದೆ. 19ರಂದು ಬೆಳಗ್ಗೆ 9ಕ್ಕೆ ಭಂಡಾರ ಒಡೆಯುವ ಕಾರ್ಯಕ್ರಮ, ಮಹಾಪೂಜೆಯೊಂದಿಗೆ ಜಾತ್ರೆ ಸಂಪನ್ನವಾಗಲಿದೆ. 3 ವರ್ಷಕ್ಕೊಮ್ಮೆ ಜರುಗುವ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಭಾಗವಹಿಸಬೇಕು ಎಂದು ಶ್ರೀ ಯಲ್ಲಮ್ಮ ದೇವಿ, ಬೀರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.