

ಕಲಬುರಗಿ: ಬ್ರಹ್ಮಪುರ ಧನಗರಗಲ್ಲಿಯ ಕೋರಿಮಠದಲ್ಲಿ ಶ್ರೀ ರೇವಣಸಿದ್ದೇಶ್ವರ ಕೋರಿ ಮಠದ ತರುಣ ಸಂಘದಿಂದ ಶ್ರೀ ಯಲ್ಲಾಲಿಂಗ ಮಹಾರಾಜರ 39ನೇ ತೊಟ್ಟಿಲೋತ್ಸವ, ಸಹಸ್ರ ದೀಪೋತ್ಸವ ಜ.12, 13ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ರಜನಿಕಾಂತ ಮೇಳಕುಂದಿ ತಿಳಿಸಿದ್ದಾರೆ. 12ರಂದು ಸಂಜೆ 6.30ಕ್ಕೆ ಕವಲಗಾದ ಶ್ರೀ ಭೀರಣ್ಣ ಮುತ್ಯಾ ಸಾನ್ನಿಧ್ಯದಲ್ಲಿ ಸಹಸ್ರ ದೀಪೋತ್ಸವ ನೆರವೇರಲಿದೆ. ಜ.13ರಂದು ಬೆಳಗ್ಗೆ 10.30ಕ್ಕೆ ಶ್ರೀ ಯಲ್ಲಾಲಿಂಗ ಮಹಾರಾಜರ ತೊಟ್ಟಿಲೋತ್ಸವ ನೆರವೇರಲಿದೆ. ಶ್ರೀ ಭೀರಣ್ಣ ಮುತ್ಯಾ, ಶ್ರೀ ಡಾ.ರಾಜಶೇಖರ ಶಿವಾಚಾರ್ಯರು, ಸಾನ್ನಿಧ್ಯ ವಹಿಸಲಿದ್ದಾರೆ. ಧನಗರಗಲ್ಲಿ, ಸಮತಾ ಕಾಲನಿ, ಕನಕ ನಗರ ಸೇರಿ ನಗರದ ಭಕ್ತರು ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.