ಸುನಿತಾ ವಿಲಿಯಮ್ಸ್ ಸ್ತ್ರೀ ಕುಲಕ್ಕೆ ಮಾದರಿ

Women's Day
ಯಲಬುರ್ಗಾದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಪಪಂ ಸದಸ್ಯೆ ಡಾ.ನಂದಿತಾ ದಾನರಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲಲಿತಾ ನಾಯಕ, ಪಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಸಿದ್ರಾಮೇಶ ಬೆಲೇರಿ, ಜಿಲ್ಲಾ ಕೌಶಲಾಭಿವೃದ್ಧಿ ಮಿಷನ್ ವ್ಯವಸ್ಥಾಪಕ ಅಹ್ಮದ್ ಹುಸೇನ್ ಇತರರಿದ್ದರು.
Published on

ಯಲಬುರ್ಗಾ: ಮಹಿಳೆ ಕೇವಲ ಗೃಹಿಣಿಯಾಗದೆ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಹೋಗಿ ಇತಿಹಾಸ ಸೃಷ್ಟಿಸಿದ್ದಾಳೆ ಎಂದು ಪಪಂ ಸದಸ್ಯ ಡಾ.ನಂದಿತಾ ದಾನರಡ್ಡಿ ಹೇಳಿದರು.

ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೌಶಲಾಭಿವೃದ್ಧಿ ಮಿಷನ್ ಕೊಪ್ಪಳ, ನಗರ ಮತ್ತು ಪ್ರದೇಶ ಮಟ್ಟದ ಒಕ್ಕೂಟ, ಪಟ್ಟಣ ಪಂಚಾಯಿತಿ ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜ್ಞಾನಿ ಸುನಿತಾ ವಿಲಿಯಮ್ಸ್ ಒಂಬತ್ತು ತಿಂಗಳು ಬಾಹ್ಯಾಕಾಶದಲ್ಲಿ ಅಧ್ಯಯನಕ್ಕೆ ಹೋಗಿ ಯಾರೂ ಮಾಡದ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರು ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾರೆ. ಮಹಿಳೆಯರಲ್ಲಿ ಹಲವಾರು ಪ್ರತಿಭೆಗಳಿವೆ. ಅವರಿಗೆ ಮುಖ್ಯ ಭೂಮಿಕೆ ಸಿಗಬೇಕಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲಲಿತಾ ನಾಯಕ ಮಾತನಾಡಿ ನಮ್ಮಲ್ಲಿನ ಮೌಢ್ಯಗಳು ಕಡಿಮೆಯಾಗಬೇಕಾಗಿದೆ. ಮಹಿಳೆಯರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಪಪಂ ಮುಖ್ಯಾಧಿಕಾರಿ ನಾಗೇಶ, ನ್ಯಾಯವಾದಿ ಅಕ್ಕಮಹಾದೇವಿ ಪಾಟೀಲ, ಪಪಂ ಸದಸ್ಯರಾದ ರೇವಣೆಪ್ಪ ಹಿರೇಕುರುಬರ, ಬಸಮ್ಮ ಬಣಕಾರ, ಸುಮಾ ಕಂಚಿ, ಶರಣಮ್ಮ ಪೂಜಾರ, ಶಾರದಾ ಆಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net