

ಯಲಬುರ್ಗಾ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ತಾಪಂ ಮಾಜಿ ಸದಸ್ಯ ಮಲ್ಲನಗೌಡ ಕೋನನಗೌಡ್ರ ಹೇಳಿದರು.
ತಾಲೂಕಿನ ಬೇವೂರಿನ ಡಾ.ಬಿ.ಆರ್.ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಬೇವೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯದಲ್ಲೇ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ, ಉತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಕರು, ಪಾಲಕರು ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಸಹಕರಿಸಬೇಕು ಎಂದರು.
ಸಿಆರ್‌ಪಿ ಶರಣು ಕುರ್ನಾಳ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳಿಗಾರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಸಣ್ಣ ಈರಪ್ಪ ವೀರಾಪುರ, ಮುಖ್ಯಶಿಕ್ಷಕ ಲಾಲ್‌ಬಹಾದೂರ್ ಶಾಸ್ತ್ರಿ, ಗುತ್ತಿಗೆದಾರ ಸಿದ್ದು ಮಣ್ಣಿನವರ, ಪಿಡಿಒ ಅಬ್ದುಲ್ ಗಫಾರ್, ತಾಪಂ ಕೆಡಿಪಿ ಸದಸ್ಯ ಭೀಮಣ್ಣ ಕೊಳಜಿ, ಪ್ರಮುಖರಾದ ಶಿವಾನಂದ ಹಿರೇಮನಿ, ಮರಿಸ್ವಾಮಿ ಮಣ್ಣಿನವರ, ಸಂಗಯ್ಯ ಹಿರೇಮಠ, ಶೇಖರಗೌಡ ಪೊಲೀಸ್ ಪಾಟೀಲ್, ಮೆಹಬೂಬ್, ಗಣೇಶ, ಕವಿತಾ, ಇಂದಿರಾ ಕೆ., ಟಿ.ಪರಶುರಾಮ, ಎಚ್.ಮಹಾಂತೇಶ, ಬಸವರಾಜ, ಕೆ.ಮಹಾವೀರ ಇತರರಿದ್ದರು.