ವಿದ್ಯಾರ್ಥಿಗಳಿಗೆ ವಿಶೇಷ ಕೌಶಲಗಳು ಅಗತ್ಯ

welcome program
ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧೀರ ಕೊರ್ಲಳ್ಳಿ ಮಾತನಾಡಿದರು. ಪ್ರಾಚಾರ್ಯ ಕೆ.ಎಚ್.ಛತ್ರದ್, ಐಕ್ಯೂಎಸಿ ಸಂಚಾಲಕ ಸುರೇಶ ಕುಮಾರ ಸೊನ್ನದ, ರೆಡ್‌ಕ್ರಾಸ್ ಸಂಚಾಲಕಿ ನಂದಾ ಇತರರಿದ್ದರು.
Published on

ಯಲಬುರ್ಗಾ: ಪದವಿ ಹಂತದಲ್ಲಿ ಕ್ರಮಬದ್ಧ ಅಧ್ಯಯನ ಮತ್ತು ಹೆಚ್ಚಿನ ಪರಿಶ್ರಮದಿಂದ ವಿದ್ಯಾರ್ಥಿಗಳು ಗುರಿ ಸಾಧಿಸಿ ಉನ್ನತ ಸ್ಥಾನ ಕಂಡುಕೊಳ್ಳಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧೀರ ಕೊರ್ಲಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧಾರಣ ಜ್ಞಾನ ಮತ್ತು ಜಾಣತನ ಪ್ರಯೋಜನವಾಗದು. ಆದ್ದರಿಂದ ವಿಶೇಷ ಕೌಶಲಗಳು ಅಗತ್ಯ ಎಂದರು.

ಪ್ರಾಚಾರ್ಯ ಕೆ.ಎಚ್.ಛತ್ರದ್ ಮಾತನಾಡಿ, ಪದವಿ ಶಿಕ್ಷಣ ಪೂರ್ಣಗೊಳಿಸಿದ ಕೂಡಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸುವಂತೆ ಕಾಲೇಜಿನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿಗಳನ್ನು ಆಯೋಜಿಸಲಾಗುತ್ತಿದೆ. ಗ್ರಂಥಾಲಯ ಆರಂಭವಾಗಿದ್ದು, ವಿವಿಧ ಪುಸ್ತಕಗಳನ್ನು ಪೂರೈಸಲಾಗುತ್ತಿದೆ. ಸಂಶೋಧನೆ ಹಾಗೂ ಶೈಕ್ಷಣಿಕ ಪಠ್ಯಪುಸ್ತಕಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಜನಪದ ಕಲಾವಿದ ಜೀವನಸಾಬ ಬಿನ್ನಾಳ ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ಪ್ರಾಧ್ಯಾಪಕ ಎ.ಬಿ.ಕೆಂಚರಡ್ಡಿ ಮಾತನಾಡಿದರು.

ಸಮಿತಿ ಸದಸ್ಯರಾದ ವಿರೂಪಾಕ್ಷಯ್ಯ ಗಂಧದ, ರೆಹಮಾನ್ ಸಾಬ್ ನಾಯಕ, ವಿಕಾಸಗೌಡ ಉಳ್ಳಾಗಡ್ಡಿ, ಬಸವರಾಜ ಒಂಟೆಲಿ, ಲಿಂಗರಾಜ ಪಾಟೀಲ್, ಕಳಕಪ್ಪ ಸೂಡಿ, ಜಯಶ್ರೀ ಕಂದಕೂರ, ಐಕ್ಯೂಎಸಿ ಸಂಚಾಲಕ ಸುರೇಶ ಕುಮಾರ ಸೊನ್ನದ, ರೆಡ್‌ಕ್ರಾಸ್ ಸಂಚಾಲಕಿ ನಂದಾ, ರೂಪಾ ಸಂಚಾಲಕ ವಿನೋಧ ಸಿದ್ದಣ್ಣವರ, ರೋವರ್ಸ್ ಸಂಚಾಲಕ ಹನುಮೇಶ, ರೇಂಜರ್ಸ್ ಸಂಚಾಲಕಿ ಲಕ್ಷ್ಮೀಬಾಯಿ, ಎನ್‌ಸಿಸಿ ಮತ್ತು ಕ್ರೀಡಾ ಸಂಚಾಲಕ ವಂಶಿಕೃಷ್ಣ, ಸಿಬ್ಬಂದಿ ಶಿವಲೀಲಾ ಯಾವಗಲ್ಲಮಠ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net