ರಾಮರಾಜ್ಯ ಪರಿಚಯಿಸಿದ ವಾಲ್ಮೀಕಿ

VALMIKI
ಯಲಬುರ್ಗಾದ ಕಲಭಾವಿಯಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ವಾಲ್ಮೀಕಿ ವೃತ್ತಕ್ಕೆ ಮಾಲಾರ್ಪಣೆ ಮಾಡಲಾಯಿತು. ಸಮಾಜದ ಗುರು ಹುಲಿಹೈದರ್‌ನ ನವೀನ ಅರವಿಂದರಾಜಾ ನಾಯಕ, ಗ್ರಾಪಂ ಸದಸ್ಯರಾದ ದೇವಪ್ಪ ವಜ್ರದ, ಮಾಕರ್ಂಡೆಪ್ಪ ಹುಣಸಿಹಾಳ, ಮುಖಂಡರಾದ ದೇವೇಂದ್ರಪ್ಪ ತಿಪ್ಪನಾಳ, ಹನುಮಗೌಡ ಕೋರಿ, ಮರಿಯಪ್ಪ ಕಡೆಮನಿ ಇದ್ದರು.
Published on

ಯಲಬುರ್ಗಾ: ಜಗತ್ತಿಗೆ ರಾಮಾಯಣ ಗ್ರಂಥ ನೀಡಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಎಲ್ಲರೂ ಓದುವ ಮೂಲಕ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹಿರೇಮನ್ನಾಪುರದ ಸಾಹಿತಿ ಆರ್.ಕೆ. ಸುಬೇದಾರ ಹೇಳಿದರು.

ಕಲಭಾವಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ವಾಲ್ಮೀಕಿ ಅವರದ್ದು. ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹನೀಯರ ವಿಚಾರಗಳನ್ನು ತಿಳಿದು ಅವರ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ದೇವೇಂದ್ರಪ್ಪ ಜಿರ್ಲಿ, ಯಮನೂರಪ್ಪ ಹೊಮ್ಮಿನಾಳ ಉಪನ್ಯಾಸ ನೀಡಿದರು. ಪ್ರಮುಖ ಬೀದಿಗಳಲ್ಲಿ ಕುಂಭ-ಕಳಸದೊಂದಿಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು.

ಸಮಾಜದ ಗುರು ಹುಲಿಹೈದರ್‌ನ ನವೀನ ಅರವಿಂದರಾಜಾ ನಾಯಕ, ಆಂಜನೇಯ ದೇವರ ಅರ್ಚಕ ಹನುಮಂತಪ್ಪ ಅಜ್ಜ, ವಿರೂಪಾಕ್ಷಯ್ಯ ಹಿರೇಮಠ, ಗ್ರಾಪಂ ಸದಸ್ಯರಾದ ದೇವಪ್ಪ ವಜ್ರದ, ಮಾಕರ್ಂಡೆಪ್ಪ ಹುಣಸಿಹಾಳ, ದೇವೇಂದ್ರಪ್ಪ ತಿಪ್ಪನಾಳ, ಹನುಮಗೌಡ ಕೋರಿ, ಮರಿಯಪ್ಪ ಕಡೆಮನಿ, ಯಂಕನಗೌಡ ಬುಡಕುಂಟಿ, ಮಹಾಂತೇಶ ನಾಯಕ, ಮಾರುತಿ ಪೂಜಾರ, ಭೀಮಣ್ಣ ತಳವಾರ್, ಬಸವರಾಜ ಮುಸಲಾಪುರ, ತಿರುಪತಿ ಗುತ್ತೂರು, ಕನಕಪ್ಪ ಗದ್ದಿ, ಮಾರುತಿ ಲಕ್ಕುಂಪುರ, ಶರಣಪ್ಪ ವಣಗೇರಿ, ಸಂತೋಷ ಗದ್ದಿ, ದ್ಯಾಮಣ್ಣ ದೇವಲ್, ಜಗದೀಶಪ್ಪ ಸಿದ್ದಾಪುರ, ಶರಣಪ್ಪ ಸಿದ್ದಾಪುರ, ಹನುಮಂತ ಹುಣಸಿಹಾಳ, ವಿರೂಪಾಕ್ಷಿ ದೇವಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net