

ಯಲಬುರ್ಗಾ: ವೀರವನಿತೆ ಒನಕೆ ಓಬವ್ವ ಜಯಂತಿ ಅರ್ಥಪೂರ್ಣ ಆಚರಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನ.11ರಂದು ಪಟ್ಟಣದ ಬೇವೂರು ರಸ್ತೆಯ ಓಬವ್ವ ವೃತ್ತಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಗುವುದು. ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಓಬವ್ವ ಭಾವಚಿತ್ರಕ್ಕೆ ಕಡ್ಡಾಯವಾಗಿ ಪೂಜೆ ಸಲ್ಲಿಸಬೇಕು. ಎಲ್ಲ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಛಲವಾದಿ ಮಹಾಸಭಾದ ಅಧ್ಯಕ್ಷ ಅಂದಪ್ಪ ಹಾಲಕೇರಿ, ಶಿರಸ್ತೇದಾರ್ ದೇವರಡ್ಡಿ, ಅಧಿಕಾರಿಗಳಾದ ಬಿ. ಮಲ್ಲಿಕಾರ್ಜುನ, ಲಿಂಗನಗೌಡ ಪಾಟೀಲ್, ಫಕೀರಪ್ಪ ಕಟ್ಟಿಮನಿ, ಬಸವರಾಜ ಗೋಗೇರಿ, ಶ್ರೀಧರ ತಳವಾರ, ಶಿವಶಂಕರ ಕರಡಕಲ್, ಪ್ರಮೋದ್ ತುಂಬಳ, ಪ್ರೇಮಾ, ಮಹಾಂತೇಶ ಹಿರೇಮಠ, ವೀರಭದ್ರಪ್ಪ ಅಂಗಡಿ, ಶಶಿಧರ ಸಕ್ರಿ, ಬೆಟ್ಟದಪ್ಪ ಮಾಳೇಕೊಪ್ಪ, ರಮೇಶ ಚಿಣಗಿ, ತಹಸಿಲ್ ನೌಕರ ಹನುಮಗೌಡ ಪಾಟೀಲ್, ಮುಖಂಡರಾದ ಸಿದ್ದಪ್ಪ ಕಟ್ಟಿಮನಿ, ಛತ್ರಪ್ಪ ಛಲವಾದಿ, ಶಂಕರ ಜಕ್ಕಲಿ, ಬಸಪ್ಪ ಛಲವಾದಿ, ವಿಜಯ ಜಕ್ಕಲಿ ಇದ್ದರು.