ಪ್ರಾಣಿ-ಪಕ್ಷಿ ಸಂಕುಲ ಹೆಚ್ಚಳಕ್ಕೆ ಅನುಕೂಲ

World Environment Day
ಯಲಬುರ್ಗಾ ತಾಲೂಕಿನ ಬೇವೂರು ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಸಸಿ ನೆಡಲಾಯಿತು. ಪ್ರಾಚಾರ್ಯೆ ನಾಗಲಕ್ಷ್ಮೀ ಮಿಸ್ಕಿನ್, ನಿಲಯ ಪಾಲಕ ಮಂಜುನಾಥ ತಳವಾರ್, ಶಿಕ್ಷಕಾರದ ಅಹ್ಮದ್‌ನೂರ್‌ಪಾಷಾ, ಚಂದ್ರಕಲಾ ಸಿರಿಮನಿ, ಶ್ರೀಶೈಲ ಬಡಿಗೇರ, ಗಾಯತ್ರಿ ಮಂತ, ಮಂಜುಳಾ ಈರಗಾರ, ಮೈಬೂಬ್‌ಸಾಬ್ ಮೊಮಿನ್ ಇದ್ದರು.
Published on

ಯಲಬುರ್ಗಾ: ಸುಂದರ ವಾತಾವರಣ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಸಿಗಳನ್ನು ಪೋಷಿಸಬೇಕು ಎಂದು

ಪ್ರಾಚಾರ್ಯೆ ನಾಗಲಕ್ಷ್ಮೀ ಮಿಸ್ಕಿನ್ ಹೇಳಿದರು.

ತಾಲೂಕಿನ ಬೇವೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಉತ್ತಮ ಪರಿಸರದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಗಿಡ ಮರಗಳನ್ನು ಬೆಳೆಸುವುದರಿಂದ ನೈರ್ಮಲ್ಯ, ಶುದ್ಧ ಗಾಳಿ ಪಡೆಯಬಹುದು. ಪ್ರಾಣಿ ಪಕ್ಷಿ ಸಂಕುಲ ಹೆಚ್ಚಳಕ್ಕೆ ಅನುಕೂಲವಾಗಲಿದೆ. ಆದ್ದರಿಂದ ಪರಿಸರ ದಿನ ಆಚರಣೆಗೆ ಸೀಮಿತವಾಗದೆ ವಿದ್ಯಾರ್ಥಿಗಳು ಸಸಿಗಳ ಪೋಷಣೆ ಮಾಡುವಲ್ಲಿ ಆಸಕ್ತಿ ತೋರಬೇಕು. ಪರಿಸರ ಸಂರಕ್ಷಣೆ ಬಗ್ಗೆ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕು ಎಂದರು.

ನಿಲಯ ಪಾಲಕ ಮಂಜುನಾಥ ತಳವಾರ್, ಶಿಕ್ಷಕಾರದ ಅಹ್ಮದ್‌ನೂರ್‌ಪಾಷಾ, ಚಂದ್ರಕಲಾ ಸಿರಿಮನಿ, ಶ್ರೀಶೈಲ ಬಡಿಗೇರ, ಗಾಯತ್ರಿ ಮಂತ, ಮಂಜುಳಾ ಈರಗಾರ, ಮೈಬೂಬ್‌ಸಾಬ್ ಮೊಮಿನ್ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net