

ಯಲಬುರ್ಗಾ: ಈಶ್ವರೀಯ ಜ್ಞಾನವನ್ನು ಅಪಾರವಾಗಿ ಅರಿತುಕೊಂಡ ರತನ ಮೋಹಿನಿ ದಾದಿ ಅವರು ಶಾಂತಿಯ ಸಾಗರವಾಗಿದ್ದರು ಎಂದು ಬ್ರ.ಕು. ಉಮಾ ಅಕ್ಕ ಹೇಳಿದರು.
ಪಟ್ಟಣದ ಈಶ್ವರೀಯ ವಿಶ್ವ ವಿದ್ಯಾಲಯ ಕೇಂದ್ರದಲ್ಲಿ ಆಯೋಜಿಸಿದ್ದ ರತನ ದಾದಿ ಹಾಗೂ ಅಂಬುಜಾ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವದಲ್ಲೆಡೆ ಈಶ್ವರೀಯ ವಿ.ವಿ.ಯಿಂದ ಇಂದು ಅವರ ಜೀವನ ಸಾಧನೆಗಳನ್ನು ಸ್ಮರಿಸಲಾಗುವುದು. ರಾಜಯೋಗ ಶಿಕ್ಷಣಕ್ಕೆ ಅವರು ಜೀವನವನ್ನೇ ಅನುಸಂಧಾನ ಮಾಡಿಕೊಂಡಿದ್ದರು. ಅಪಾರ ಜ್ಞಾನ ಪಡೆದುಕೊಂಡಿದ್ದ ಅವರ ವಿದ್ವತ್ತಿಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು, ಬಿರುದುಗಳು ಒಲಿದು ಬಂದಿದ್ದವು ಎಂದರು. ರತನ ಮೋಹಿನಿ ದಾದಿ 13 ವಯಸಿನಲ್ಲೇ ಬಾಬಾನ ಕೃಪೆಗೊಲಿದು ಸೇವಾಧಾರಿಗಳಾಗಿ ನಿರಂತರವಾಗಿ ಜ್ಞಾನಾಮೃತ ಉಣಬಡಿಸಿದರು ಎಂದು ಹೇಳಿದರು. ಪ.ಪಂ. ಮಾಜಿ ಉಪಾಧ್ಯಕ್ಷೆ ಮೀನಾಕ್ಷಮ್ಮ ಮಲಕಸಮುದ್ರ, ಪ್ರಮುಖರಾದ ಶಾರದಾ ಕೊಣ್ಣೂರು, ರತ್ನಮ್ಮ ನಿಂಗೋಜಿ, ಶಿವಮ್ಮ ಗಾಣಗೇರ, ಶ್ರೀಗಿರಿ ಬೇಲೆರಿ ಹಾಗೂ ಇನ್ನಿತರರಿದ್ದರು.