

ಯಲಬುರ್ಗಾ: ಪಟ್ಟಣದ ಪ್ರತಿ ವಾರ್ಡ್‌ನಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಹಿರಿದಾಗಿದೆ ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.
ಪಟ್ಟಣದ ಸಾಯಿ ಪ್ಯಾಲೇಸ್‌ನಲ್ಲಿ ಪಪಂ, ಪೌರ ಸೇವಾ ನೌಕರರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪಟ್ಟಣದ ಸ್ವಚ್ಛತೆಗೆ ಸಾಕಷ್ಟು ಶ್ರಮ ಪಡುತ್ತಿದ್ದಾರೆ. 6ಲಕ್ಷದಂತೆ 10ಜನ ಪೌರ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡಲಾಗುತ್ತಿದೆ. ಹಂತ ಹಂತವಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಪೌರ ಕಾರ್ಮಿಕರು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಮುಖ್ಯಶಿಕ್ಷಕ ದೇವಪ್ಪ ವಾಲ್ಮೀಕಿ, ಪೌರ ಸೇವಾ ನೌಕರರ ಸೇವಾ ಸಂಘದ ಸ್ಥಳೀಯ ಅಧ್ಯಕ್ಷ ಹನುಮಂತಪ್ಪ ಛಲವಾದಿ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಆಶ್ರಯ ಸಮಿತಿ ಸದಸ್ಯ ಸಿದ್ದಪ್ಪ ಕಟ್ಟಿಮನಿ, ಪಪಂ ಸದಸ್ಯರಾದ ರೇವಣಪ್ಪ ಹಿರೇಕುರುಬರ, ಕಳಕಪ್ಪ ತಳವಾರ್, ಅಶೋಕ ಅರಕೇರಿ, ಹನುಮಂತ ಭಜಂತ್ರಿ, ಶರಣಮ್ಮ ಪೂಜಾರ, ಪ್ರಮುಖರಾದ ಛತ್ರಪ್ಪ ಛಲವಾದಿ, ಇಕ್ಬಾಲ್‌ಸಾಬ್ ವಣಗೇರಿ, ಡಿ.ಕೆ.ಪರಶುರಾಮ, ದುರಗಮ್ಮ ಬಾರಿಗಿಡದ ಅಂದಪ್ಪ ಹಾಳಕೇರಿ, ಶಶಿಧರ, ಸಿಬ್ಬಂದಿ ರಾಮಣ್ಣ ಭಜಂತ್ರಿ, ರಮೇಶ ಬೇಲೇರಿ, ಶಿವಕುಮಾರ ಸರಗಣಾಚಾರ, ಸುಭಾಸ್ ಭಾವಿಮನಿ, ಸುಮಾ, ವೆಂಕಣ್ಣ ಜೋಶಿ ಇತರರಿದ್ದರು.