

ಯಲವಿಗಿ: ಸವಣೂರ ತಾಲೂಕಿನ ಯಲವಿಗೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ನೀಲಪ್ಪ ಗೂಳಪ್ಪ ಮೂಗದೂರ ಹಾಗೂ ಉಪಾಧ್ಯಕ್ಷೆಯಾಗಿ ಶಿಲ್ಪಾ ನಿಂಗನಗೌಡ ಹೊಸಮನಿ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮಾ ಕೆ.ಎಸ್. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸಹಾಯಕ ಸಿಬ್ಬಂದಿ ಶಿಲ್ಪಾ ಹೊಸಮಠ, ಪಿಡಿಒ ಚಂದ್ರು ಲಮಾಣಿ, ಕಾರ್ಯದರ್ಶಿ ಎಸ್.ಎಫ್. ಪಾಟೀಲ, ಗ್ರಾಪಂ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಪ್ಪ ರಾಮಜೋಗಿ. ಗ್ರಾಪಂ ಮಾಜಿ ಅಧ್ಯಕ್ಷೆ ದೇವಕ್ಕ ರಾಮಜೋಗಿ, ಮಂಜುನಾಥ ಸರಸೂರಿ, ನಿಂಗನಗೌಡ ಹೊಸಮನಿ, ನಾಗಣ್ಣ ಮತ್ತೂರ, ಪ್ರಕಾಶ ಲಮಾಣಿ, ಕಮಲವ್ವ ಹಾಳೆಪ್ಪನವರ, ಗ್ರಾಪಂ ಸದಸ್ಯರು ಹಾಗೂ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.