ಅಭ್ಯರ್ಥಿಗಳ ನಾಮಪತ್ರಗಳು ಸಿಂಧು

Oplus_131072
ಯಳಂದೂರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪಪಂ 5ನೇ ವಾರ್ಡಿಗೆ ನಡೆಯಲಿರುವ ಉಪಚುನಾವಣೆಯ ನಾಮಪತ್ರ ಪರಿಶೀಲನೆ ನಡೆಸಲಾಯಿತು. ಚುನಾವಣಾಧಿಕಾರಿ ನಂಜುಂಡಯ್ಯ, ಅಭ್ಯರ್ಥಿಗಳು ಇದ್ದರು.
Published on

ಯಳಂದೂರು: ಪಟ್ಟಣ ಪಂಚಾಯಿತಿ 5ನೇ ವಾರ್ಡಿಗೆ ನ.23ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಾಮಪತ್ರಗಳು ಸಿಂಧುವಾಗಿವೆ ಎಂದು ಚುನಾವಣಾಧಿಕಾರಿ ನಂಜುಂಡಯ್ಯ ಮಾಹಿತಿ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಶಶಿಧರ್ ಹಾಗೂ ಬಿಜೆಪಿ ಅಭ್ಯರ್ಥಿ ಮಹದೇವ ಎಂಬುವರ ಸಮ್ಮುಖದಲ್ಲಿ ನಾಮಪತ್ರ ಪರಿಶೀಲನೆಯನ್ನು ನಂಜುಂಡಯ್ಯ ಹಾಗೂ ಶಿವಲಂಕಾರ್ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಇವೆರಡೂ ನಾಮಪತ್ರಗಳು ಸರಿಯಾಗಿವೆ. ಅಭ್ಯರ್ಥಿಗಳ ಎಲ್ಲ ದಾಖಲೆಗಳನ್ನು ಚುನಾವಣಾ ಆಯೋಗದ ನೀತಿ, ನಿಮಯದಂತೆ ಪರಿಶೀಲನೆ ನಡೆಸಲಾಗಿದ್ದು, ಸಿಂಧುವಾಗಿವೆ. ನಾಮಪತ್ರ ವಾಪಸ್ಸು ಪಡೆಯಲು ನ.14ರ ಮಧ್ಯಾಹ್ನ 3 ಗಂಟೆಯ ತನಕ ಸಮಯವಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net