ಕೆಸ್ತೂರು ಗ್ರಾಪಂ ಅಧ್ಯಕ್ಷೆ ದೊಡ್ಡತಾಯಮ್ಮ

07 yelandur 01
Published on

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ದೊಡ್ಡತಾಯಮ್ಮ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿದ್ದ ಕೋಮಲಾ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಹಾಗಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪಂಚಾಯಿತಿ ವ್ಯಾಪ್ತಿಗೆ ಸೇರುವ ಕಟ್ನವಾಡಿ ಗ್ರಾಮದ ದೊಡ್ಡತಾಯಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು.
20 ಜನ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿರುವ ಪಂಚಾಯಿತಿಯಲ್ಲಿ ಮಾನಸ ಅವರು ಹೊರತುಪಡಿಸಿ ಇತರ 19 ಸದಸ್ಯರೂ ಹಾಜರಿದ್ದಾರೆ. ಇವರೆಲ್ಲೂ ದೊಡ್ಡತಾಯಮ್ಮರನ್ನು ಬೆಂಬಲಿಸಿದ್ದು, ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಪಶು ಇಲಾಖೆಯ ಅಧಿಕಾರಿ ಡಾ.ಶಿವರಾಜು ಘೋಷಿಸಿದರು.

ನೂತನ ಅಧ್ಯಕ್ಷೆ ದೊಡ್ಡತಾಯಮ್ಮ ಮಾತನಾಡಿ, ಕೆಸ್ತೂರು ಗ್ರಾಮ ಪಂಚಾಯಿತಿ ತಾಲೂಕಿನ ದೊಡ್ಡ ಪಂಚಾಯಿತಿಗಳಲ್ಲಿ ಒಂದಾಗಿದೆ. ಕೆಸ್ತೂರು, ಕೆ.ಹೊಸೂರು, ಕಟ್ನವಾಡಿ, ಬಸವಾಪುರ ಗ್ರಾಮಗಳು ಒಳಪಡುತ್ತವೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ನನ್ನ ಅವಧಿಯಲ್ಲಿ ಸರ್ಕಾರದಿಂದ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು. ನರೇಗಾ ಯೋಜನೆಯಡಿ ಪಂಚಾಯಿತಿ ಅಭಿವೃದ್ಧಿಗೆ ಪೂಕರವಾಗುವ ಹಾಗೂ ಸಾಮಾನ್ಯ ಜನರಿಗೆ ಅವಶ್ಯಕವಾಗಿರುವ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ಕೆ.ಎನ್. ಬಾಲುಪ್ರಸಾದ್, ಪಿ.ಮಹದೇವಸ್ವಾಮಿ, ಎನ್.ರೂಪಾ, ಕೆ.ಎಂ.ರಾಜು, ಎನ್.ಕುಮಾರ್, ಎನ್.ಭಾಗ್ಯ, ಆರ್. ಸುನಂದಾ, ಎಸ್.ಮಹದೇವಸ್ವಾಮಿ, ಗುರುಲಿಂಗಯ್ಯ, ಸಿ. ಸುನೀತಾ, ಎಸ್.ಮಹೇಂದರ್, ಜಿ.ಪ್ರಸಾದ್, ಕೋಮಲಾ, ಕೆ.ಬಿ.ಮಲ್ಲಣ್ಣ, ಮಮತಾ, ಎಸ್. ರಾಚಪ್ಪಾಜಿ, ಎಂ.ಎಂ.ಶ್ರುತಿ, ಪಿಡಿಒ ಮಹದೇವಸ್ವಾಮಿ ಮುಖಂಡರಾದ ಸಿದ್ದರಾಜು, ಗುರು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net