

ಯಳಂದೂರು: ಯಳಂದೂರು ತಾಲೂಕು ಭೂ ನ್ಯಾಯಮಂಡಳಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಕೊಳ್ಳೇಗಾಲ ಉಪವಿಭಾಗ ವ್ಯಾಪ್ತಿಗೆ ಒಳಪಡುವ ತಾಲೂಕಿನ ಮಂಡಳಿಗೆ ಅಧ್ಯಕ್ಷರಾಗಿ ಸಹಾಯಕ ಆಯುಕ್ತರು ಕೊಳ್ಳೇಗಾಲ ಉಪವಿಭಾಗ, ಸದಸ್ಯರಾಗಿ ಕೆಸ್ತೂರು ಗ್ರಾಮದ ಕೆ.ಆರ್. ಗುರುರಾಜ್ ಸೇರಿದಂತೆ ತಾಲೂಕಿನ ಒಟ್ಟು ನಾಲ್ಕು ಜನ ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಯಳಂದೂರು ತಹಸೀಲ್ದಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕಂದಾಯ ಇಲಾಖೆಯ (ಭೂ ಸುಧಾರಣೆ) ಅಧೀನ ಕಾರ್ಯದರ್ಶಿ ಆರ್.ಗೌರಮ್ಮ ಪ್ರಕಟಣೆ ತಿಳಿಸಿದ್ದಾರೆ.