ಯಳಂದೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ಭೀಮ್‌ರಾವ್ ರಾಮ್‌ಜೀ ಪ್ರೌಢಶಾಲೆ ವತಿಯಿಂದ ಹೊನ್ನೂರು ಗ್ರಾಮದ ಡಾ. ಭೀಮ್‌ರಾವ್ ರಾಮ್‌ಜೀ ಪ್ರೌಢಶಾಲೆಯಲ್ಲಿ ಅ.1 ರಂದು ಬೆಳಗ್ಗೆ 10 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ಮಕ್ಕಳಿಗೆ ದಾನಿಗಳಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆರಕ್ಷಕ ವೃತ್ತ ನಿರೀಕ್ಷಕ ಆರ್.ಶ್ರೀಕಾಂತ್, ಮುಖ್ಯ ಶಿಕ್ಷಕ ಕೆ.ಎನ್.ಪ್ರಮೋದ್ ಚಂದ್ರನ್, ಕಸಾಪ ತಾಲೂಕು ಅಧ್ಯಕ್ಷ ಯರಿಯೂರು ಎನ್.ನಾಗೇಂದ್ರ, ಸಮಾಜ ಸೇವಕ ಲೋಕೇಶ್ ಸೀಗಡಿ, ಗ್ರಾಪಂ ಅಧ್ಯಕ್ಷ ಆರ್.ಪುಟ್ಟಬಸವಯ್ಯ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.