ಯಳಂದೂರು : ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11ನೇ ವಾರ್ಡ್‌ಗಳಲ್ಲಿ ಸೆ.21 ಹಾಗೂ ಸೆ.22ರಂದು ಎರಡು ದಿನಗಳ ಕಾಲ ಬೀದಿ ನಾಯಿಗಳಿಗೆ ಸಂತಾನಹರಣ ಚುಚ್ಚು ಮದ್ದು ನೀಡುವ ಕಾರ್ಯ ಹಮ್ಮಿಕೊಂಡಿರುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ ತಿಳಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿಯ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಿರಿಯ ನಾಗರಿಕರು, ಮಕ್ಕಳು ನಾಯಿ ಕಡಿತಕ್ಕೊಳಗಾಗುತ್ತಿದ್ದಾರೆ. ಹಾಗಾಗಿ ಎರಡು ದಿನಗಳು ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯಚರಣೆ ಮಾಡಿ ನಾಯಿ ಹಿಡಿದು, ಚುಚ್ಚು ಮದ್ದು ನೀಡಿ ಸಂತಾನಹರಣ ಚಿಕಿತ್ಸೆ ಮಾಡಿಸಲಾಗುವುದು. ಈ ಸಮಯದಲ್ಲಿ ಸಾಕು ನಾಯಿಗಳ ಮಾಲೀಕರು ತಮ್ಮ ನಾಯಿಗಳನ್ನು ಬೀದಿಯಲ್ಲಿ ಬಿಡದೆ ಮನೆಯಲ್ಲಿ ಕತ್ತಿಗೆ ಬೆಲ್ಟ್ ಹಾಕಿ ಕಟ್ಟಿಹಾಕಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.