ಆದಿವಾಸಿಗಳ ಸಮಗ್ರ ಮಾಹಿತಿ ಒಳಗೊಂಡ ಕಾನು ಗ್ರಂಥಾಲಯ

Oplus_131072
Oplus_131072
Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ದಕ್ಷಿಣ ಭಾರತ ಆದಿವಾಸಿಗಳ ಸಂಪೂರ್ಣ ಮಾಹಿತಿ ಒಳಗೊಂಡ ಕಾನು ಗ್ರಂಥಾಲಯವನ್ನು ಸೋಲಿಗರ ಮುಖಂಡರು ಭಾನುವಾರ ಉದ್ಘಾಟಿಸಿದರು.

ಜಿ.ಪಂ.ಮಾಜಿ ಸದಸ್ಯೆ ಕೇತಮ್ಮ ಮಾತನಾಡಿ, ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಆದಿವಾಸಿಗಳ ಇತಿಹಾಸ, ವರ್ತಮಾನ ಮತ್ತು ಸಂಸ್ಕೃತಿಯ ಮೊದಲ ಜ್ಞಾನ ಕೇಂದ್ರವಾಗುವ ಗುರಿಯನ್ನು ಕಾನು ಗ್ರಂಥಾಲಯ ಹೊಂದಿದೆ. ಸಮುದಾಯಗಳ ಕುರಿತು ಹೊರಗಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆದಿವಾಸಿಗಳ ಇತಿಹಾಸ ಸಂಸ್ಕೃತಿ, ಆಚಾರ-ವಿಚಾರ, ಆಹಾರ, ಪದ್ಧತಿ, ಜ್ಞಾನ ಕುರಿತು ಸಮಗ್ರ ಮಾಹಿತಿ ಗ್ರಂಥಾಲಯದಲ್ಲಿ ದೊರಕಲಿದೆ ಎಂದರು.

ಆದಿವಾಸಿ ಸಮುದಾಯ ಪ್ರಾಚೀನ ಜನಾಂಗವಾಗಿದ್ದರೂ ಸಮಾಜದ ಕಟ್ಟಡೆಯ ಸ್ಥಾನದಲ್ಲಿ ಉಳಿದು ಬಿಟ್ಟಿದ್ದಾರೆ. ಇವರ ಜೀವನ ಕುರಿತು ಸಂಶೋಧಕರಿಗೆ ಒಂದೇ ಸೂರಿನಡಿ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹಾಗೂ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲೇಖನಗಳನ್ನು ಬರೆಸುವುದು ಇನ್ನಿತರ ಚಟುವಟಿಕೆ ನಡೆಸಲಾಗುತ್ತದೆ ಎಂದರು.

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಮಾತನಾಡಿ, ಕಾನು ಹೆಸರಿನ ಗ್ರಂಥಾಲಯದಲ್ಲಿ ದಕ್ಷಿಣ ಭಾರತ ಆಧಿವಾಸಿಗಳ ಕುರಿತು ಅಧ್ಯಯನ ಮಾಡುವವರಿವರಿಗೆ, ಸಂಶೋಧಕರಿಗೆ , ಲೇಖಕರಿಗೆ 1200 ಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದ್ದು, ಸಂಶೋಧಕರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದರು. ಪ್ರಮುಖರಾದ ಪ್ರವೀಣ್ ರಾವ್ ಹಾಗೂ ಸೋಲಿಗ ಸಮುದಾಯದ ವಿವಿಧ ಪೋಡಿನ ಮುಖಂಡರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net