ಎಸ್.ನಾರಾಯಣ್, ಶ್ರುತಿ ಅವಿರೋಧ ಆಯ್ಕೆ

Oplus_0
Oplus_0
Published on

ಯಳಂದೂರು ; ತಾಲೂಕಿನ ಯರಿಯೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ -1ರ ಎಸ್‌ಡಿಎಂಸಿ ಅಧ್ಯಕ್ಷರಾಗಿ ಎಸ್.ನಾರಾಯಣ್ ಹಾಗೂ ಉಪಾಧ್ಯಕ್ಷರಾಗಿ ಶ್ರುತಿ ಅವಿರೋಧವಾಗಿ ಆಯ್ಕೆಯಾದರು.

ಶಾಲೆಯಲ್ಲಿ ಶುಕ್ರವಾರ ನಡೆದ ಎಸ್‌ಡಿಎಂಸಿ ಸದಸ್ಯರ ಸಭೆಯಲ್ಲಿ ಪಾಲಕರು ಅಭಿಪ್ರಾಯ ಪಡೆದು ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಎಸ್.ನಾರಾಯಣ್ ಮಾತನಾಡಿ, ಶಿಕ್ಷಕ ವರ್ಗ, ಮಕ್ಕಳ ಕಲಿಕೆ, ಪಾಠ ಪ್ರವಚನ, ಶಾಲಾಭಿವೃದ್ಧಿ ಸೇರಿದಂತೆ ಮಕ್ಕಳ ಕಲಿಕೆ ಮಟ್ಟ ಹೆಚ್ಚಾಗಲು ಎಲ್ಲ ಸದಸ್ಯರು ಸಹಕಾರ, ಸಲಹೆ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನಸ್ವಾಮಿ, ಕುಮಾರ್, ಮುಖ್ಯಶಿಕ್ಷಕ ಯಶೋಧಾ, ಶಿಕ್ಷಕರಾದ ನಿರ್ಮಲಾರಾಣಿ, ಮಂಜುಳಾ, ಮಮತಾ, ಬಸವಣ್ಣ, ಸುರೇಶ್, ಮಹದೇವ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶಿವಣ್ಣ, ನಿಂಗರಾಜಮ್ಮ, ಪಲ್ಲವಿ, ದೇವಿ, ಯಶೋದಾ, ಸುಧಾ, ರಾಣಿ, ಲಲಿತಾ, ನಂದಿನಿ, ನೇತ್ರಾವತಿ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net