

ಯಳಂದೂರು : ತಾಲೂಕಿನ ಕೆಸ್ತೂರು ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಸಮಿತಿಯ ಅಧ್ಯಕ್ಷರಾಗಿ ಬಿ.ಸಿದ್ದರಾಜು ಹಾಗೂ ಉಪಾಧ್ಯಕ್ಷರಾಗಿ ಕುಮಾರ್ ನೇಮಕವಾಗಿದ್ದಾರೆ. ಸರ್ಕಾರಿ ಪ್ರೌಢಶಾಲೆಯ ಸಮಿತಿಯ ನಿರ್ದೇಶಕರಾಗಿ ಪರಶಿಮೂರ್ತಿ, ಎಸ್ ರಾಚಯ್ಯ, ಪಾಪಣ್ಣ, ನೇತ್ರಾವತಿ, ನಂದಿನಿ, ಮೀನಾಕ್ಷಿ ಜ್ಯೋತಿ, ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಉಮಾಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.