ಜ್ವರ ನಿಯಂತ್ರಣಕ್ಕೆ ಸೂಕ್ತ ಕ್ರಮ

11 yelandur 01
Published on

ಯಳಂದೂರು: ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದಲ್ಲಿ ಡೆಂೆ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಡೆಂೆ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾ ಹಾಗೂ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಈಗಾಗಲೇ ಎಲ್ಲ ಚರಂಡಿಗಳ ಹೂಳೆತ್ತಿ ನೀರು ಸರಾಗವಾಗಿ ಹಾದು ಹೋಗುವಂತೆ ಕ್ರಮ ವಹಿಸಲಾಗಿದೆ. ಅಲ್ಲದೆ ಪ್ರತಿ ಬೀದಿಯಲ್ಲೂ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಳೆ ಹೆಚ್ಚಾಗಿ ಆಗುತ್ತದೆ. ಶುದ್ಧ ನೀರು ಶೇಖರಣೆಗೊಳ್ಳುತ್ತದೆ. ಈ ಶುದ್ಧ ನೀರಿನಲ್ಲೇ ಡೆಂೆ, ಮಲೇರಿಯಾ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯಾಗುತ್ತದೆ ಎಂದು ತಿಳಿಸಿದರು.

ಮನೆ ಮುಂಭಾಗ ತೆಂಗಿನಕಾಯಿ ಚಿಪ್ಪು, ಟಯರ್, ಹೂದಾನಿಗಳು, ತೆರೆದ ಪಾತ್ರೆಗಳು ಸೇರಿದಂತೆ ಇತರೆಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದನ್ನು ವಾರಕ್ಕೆರಡು ಬಾರಿಯಾದರೂ ನೀರು ಶುದ್ಧೀಕರಿಸಿಕೊಳ್ಳಬೇಕು, ಪ್ರತಿ ಶುಕ್ರವಾರ ಡ್ರೈ ಡೇ ಆಚರಿಸುವ ಮೂಲಕ ಮನೆಯಲ್ಲಿ ನೀರು ಶೇಖರಿಸುವ ಎಲ್ಲ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಕು. ಯಾವುದೇ ಸಾಮಾನ್ಯ ಜ್ವರ ಬಂದರೂ ನಿರ್ಲಕ್ಷಿಸಬಾರದು. ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಪಟ್ಟಣದ ಪ್ರತಿ ವಾರ್ಡಿಗೂ ತೆರಳಿ ಡೆಂೆ ನಿಯಂತ್ರಣಕ್ಕೆ ಬೇಕಿರುವ ಸಲಹೆ ಸೂಚನೆಗಳನ್ನು ಪಂಚಾಯಿತಿ ವತಿಯಿಂದ ನೀಡಲಾಗುತ್ತಿದೆ. ಅಗತ್ಯವಿದ್ದಲ್ಲಿ ಫಾಗಿಂಗ್ ಮಾಡಿಸಲಾಗುವುದು. ಈ ಬಗ್ಗೆ ಪಟ್ಟಣದ ಜನನಿಬಿಡ ಪ್ರದೇಶದಲ್ಲಿ ಡೆಂೆ ನಿಯಂತ್ರಣದ ಬಗ್ಗೆ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.

ಪಟ್ಟಣದ ಬಸ್ ನಿಲ್ದಾಣ, ಎಸ್‌ಬಿಐ ಸರ್ಕಲ್, ಬಳೇಪೇಟೆ, 2ನೇ ವಾರ್ಡಿನ ಬಳಿ ಇರುವ ಉರ್ದು ಶಾಲೆ ಸೇರಿದಂತೆ ವಿವಿಧೆಡೆ ರಂಗದೇಗುಲ ಕಲಾ ತಂಡದ ವತಿಯಿಂದ ಡೆಂೆ ನಿಯಂತ್ರಣದ ಬಗ್ಗೆ ಬೀದಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಂಜು, ಮಹದೇವನಾಯಕ, ರಂಗದೇಗುಲ ಕಲಾ ತಂಡದ ಅಧ್ಯಕ್ಷ ಶಾಂತರಾಜು, ಪ.ಪಂ. ಬಸವಣ್ಣ, ಪರಶಿವಮೂರ್ತಿ, ಮಲ್ಲಿಕಾರ್ಜುನ, ವಿಜಯ, ರಘು ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net