

ಯಳಂದೂರು: ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯಡಿ ಕೂಲಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ಅಂಬಳೆ ಗ್ರಾಮದ ಪಂಚಾಯಿಗೆ ಮಂಗಳವಾರ ನೂರಾರು ಕಾರ್ಮಿಕರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಂಗಳವಾರ ಅಂಬಳೆ ಕೆರೆ ಅಭಿವೃದ್ಧಿ, ಅಂಬಳೆ ಗ್ರಾಮದ ಶಾಂತಪ್ಪ ಜಮೀನಿಂದ ಪುಟ್ಟಸ್ವಾಮಿ ಜಮೀನಿನವರೆಗೆ ಕಾಲುವೆ ಅಭಿವೃದ್ಧಿ ಹಾಗೂ ಮುದ್ದಚಾರಿ ಜಮೀನಿನಿಂದ ಪ್ರಭುಸ್ವಾಮಿ ಎಂಬವರ ಜಮೀನಿನವರೆಗೆ ಕಾಲುವೆ ನಿರ್ಮಾಣ ಸೇರಿದಂತೆ 3 ಕಾಮಗಾರಿಗೆ 180 ಕ್ಕೂ ಹೆಚ್ಚು ನೋಂದಾಯಿತ ಕಾರ್ಮಿಕರು ಹಾಜರಾತಿಗೆ ಸಹಿ ಹಾಕಿ ಕೆಲಸ ಆರಂಭಿಸಿದರು.
ನರೇಗಾ ಯೋಜನೆ ಬಿಎಫ್‌ಡಿ ನಾರಾಯಣ್ ಪ್ರತಿಕ್ರಿಯಿಸಿ, ಕೂಲಿ ಕಾರ್ಮಿಕರಿಗೆ ಮನೆಗೆ ತೆರಳಲು ಸೂಚಿಸಿದರು.
ಗ್ರಾಮದ ಶ್ರೀನಿವಾಸ್ ಎಂಬುವರು ಇಲಾಖೆಯ ಉನ್ನತಾಧಿಕಾರಿಗಳಿಗೆ ಹಾಗೂ ಒಂಬುಡ್ಸ್‌ಮನ್ ದೂರು ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಮಾಡಬಾರದು ಎಂದು ವಿವರಿಸಿದರು. ಇದ್ದರಿಂದ ವಿಚಲಿತಗೊಂಡ ಕೂಲಿ ಕಾರ್ಮಿಕರು ಪ್ರತಿಭಟನೆಗೆ ಮುಂದಾದರು. ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ, ನರೇಗಾ ಕಾಮಗಾರಿ ನಿಲ್ಲಿಸುವುದು ಸರಿಯಲ್ಲ ಎಂದು ಆಗ್ರಹಿಸಿದರು. ಮುಖಂಡರಾದ ಸರೋಜಮ್ಮ, ಗೌರಮ್ಮ ನೇತೃತ್ವ ವಹಿಸಿದ್ದರು.
ನರೇಗಾ ಯೋಜನೆಗೆ ಸಂಬಂಧಪಟ್ಟಂತೆ ಗ್ರಾಮದ ಶ್ರೀನಿವಾಸ್ ಎಂಬುವರು ಇಲಾಖೆಯ ಉನ್ನತಾಧಿಕಾರಿಗಳಿಗೆ ಹಾಗೂ ಒಂಬುಡ್ಸ್‌ಮನ್‌ಗೆ ದೂರು ನೀಡಿರುವ ಕಾರಣ ಕೆಲಸವನ್ನು ನಿಲ್ಲಿಸುವುದು ಸರಿಯಲ್ಲ. ಕಾಮಗಾರಿ ಸ್ಥಳಕ್ಕೆ ತೆರಳಿ ಕೆಲಸ ಮಾಡಲು ತಿಳಿಸಲಾಗಿದೆ.ಕಾವ್ಯಾಅಂಬಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಬಳೆ ಪಂಚಾಯಿತಿ ವ್ಯಾಪ್ತಿಯ ಮಹಂತಾಳ ಕಟ್ಟೆ ಕಾಮಗಾರಿಯ ನಡೆದಿರುವ ಕಾಮಗಾರಿ ಸಂಬಂಧಪಟ್ಟ ವಿಚಾರವಾಗಿ ದೂರು ನೀಡಲಾಗಿದೆ, ಆದರೆ ನರೇಗಾ ಯೋಜನೆ ಕೆಲಸವನ್ನು ಜನರಿಗೆ ನೀಡಬೇಡಿ ಎಂದು ದೂರು ನೀಡಿಲ್ಲ ಎಂದು ತಿಳಿಸಿದರು.ಶ್ರೀನಿವಾಸ್, ಅಂಬಳೆ ಗ್ರಾಮದ ನಿವಾಸಿ