ಬಂಗ್ಲೆಪೋಡು ಮುಖ್ಯ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ

Oplus_131072
Oplus_131072
Published on

ಯಳಂದೂರು: ತಾಲೂಕಿನ ಪ್ರಸಿದ್ಧ ಗಿರಿಧಾಮ ಬಿಳಿಗಿರಿರಂಗನಬೆಟ್ಟದ ಜನನಿಬಿಡ ಪ್ರದೇಶವಾಗಿರುವ ಬಂಗ್ಲೆಪೋಡಿನ ಮುಖ್ಯ ರಸ್ತೆಯಲ್ಲಿ ಮತ್ತೆ ಎರಡು ವಕ್ರದಂತಗಳಿರುವ ಕಾಡಾನೆ ಗುರುವಾರ ಬೆಳಗ್ಗೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಗ್ರಾಮದ ಬಂಗ್ಲೆಪೋಡಿನ ಮುಖ್ಯ ರಸ್ತೆಯಲ್ಲಿ ಜೂ.13 ರಂದು ಉದ್ದ ಹಾಗೂ ವಕ್ರದಂತದ ಕಾಡಾನೆ ಕಾಣಿಸಿಕೊಂಡಿತ್ತಲ್ಲದೆ, ಕೆಎಸ್‌ಆರ್‌ಟಿಸಿ ಬಸ್ ಅನ್ನು ಹಿಂಬಾಲಿಸಿ ಆತಂಕ ಸೃಷ್ಟಿಸಿತ್ತು. ಅಲ್ಲದೆ ಒಂದು ವಾರಗಳ ಅಂತರದಲ್ಲಿ ಅದೇ ರಸ್ತೆಯಲ್ಲಿ ಮತ್ತೊಂದು ಕಾಡಾನೆ ಕಾಣಿಸಿಕೊಂಡು ಸಾರ್ವಜನಿಕರು, ಪ್ರವಾಸಿಗರು ಹಾಗೂಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಈಗ ಮತ್ತೆ ವಕ್ರದಂತದ ಕಾಡಾನೆ ಕಾಣಿಸಿಕೊಂಡಿದೆ. ಇದು ರಸ್ತೆಯಲ್ಲಿ ಓಡುತ್ತ ಸಾಗಿದೆ. ಇದನ್ನು ಕಂಡು ಸ್ಥಳೀಯರು ಜೋರು ಶಬ್ದ ಮಾಡಿದ್ದರಿಂದ ಆನೆ ಕಾಡು ಸೇರಿದೆ.

ಈ ಸ್ಥಳದಲ್ಲಿ ಆಗಾಗ ಕಾಡಾನೆಗಳು ಹಾಡುಹಗಲೇ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ಬಿಳಿಗಿರಿರಂಗನಾಥಸ್ವಾಮಿ ದೇಗುಲಕ್ಕೆ ಸಾಗುವ ಪ್ರಮುಖ ರಸ್ತೆಯಾಗಿದ್ದು, ನಿತ್ಯ ಹತ್ತಾರು ವಾಹನಗಳು ಇಲ್ಲಿಂದ ಸಂಚರಿಸುತ್ತದೆ. ಅಲ್ಲದೆ ಇಲ್ಲಿರುವ ಪೋಡಿನಲ್ಲಿ ಹತ್ತಾರು ಕುಟುಂಬ ವಾಸವಾಗಿದ್ದು ವಯೋವೃದ್ಧರು ಹಾಗೂ ಮಕ್ಕಳು ಹೊರಬರಲು ಹಿಂದೇಟು ಹಾಕುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net