ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ

22 yelandur 01
Published on

ಯಳಂದೂರು: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಆಹಾರ ನಿರೀಕ್ಷಕ ಹಾಗೂ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಟಿ.ಹೊಸೂರು, ಶಿವಕಹಳ್ಳಿ ಗ್ರಾಮದಿಂದ ಗುರುವಾರ ಸಂಜೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಅಲ್ಕೆರೆ ಅಗ್ರಹಾರದ ಮೂಲಕ ತೆರಳುತ್ತಿದ್ದ ಓಮ್ನಿ ವ್ಯಾನ್, 384 ಕೆಜಿ ಅಕ್ಕಿ ಸಮೇತ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚೌಡಯ್ಯ (64) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕು ಆಹಾರ ನಿರೀಕ್ಷಕ ಬಿಸಿಲಯ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ನಾಗೇಂದ್ರ, ಮಹೇಶ್, ಮಹದೇವಪ್ಪ, ಪ್ರಮೋದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net