ಮುಂಟಿಪಾಳ್ಯ ಗ್ರಾಮದಲ್ಲಿ ಹೆಬ್ಬಾವು ಸೆರೆ

26 yelandur 02
Published on

ಯಳಂದೂರು: ತಾಲೂಕಿನ ಮುಂಟಿಪಾಳ್ಯ ಗ್ರಾಮದಲ್ಲಿನ ಬಾಳೆ ಬೆಳೆಯ ನಡುವೆ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನು ಉರಗ ರಕ್ಷಕ ಸ್ನೇಕ್ ಮಹೇಶ್ ಸೋಮವಾರ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಬಿಆರ್‌ಟಿ ಅರಣ್ಯ ಪ್ರದೇಶದ ಸಮೀಪದ ಜಮುನಾ ತೋಟದ ಬಳಿಯಲ್ಲಿ ಜಮೀನಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಕಾರ್ಮಿಕರು ಕೆಲಸ ಮಾಡುವುದನ್ನು ನಿಲ್ಲಿಸಿ ಗಾಬರಿಯಿಂದ ಓಡಿಹೋಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಮಧ್ಯಾಹ್ನ ಬಿಆರ್‌ಟಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜನರು ಹಾವುಗಳನ್ನು ಕಂಡರೆ ಹೊಡೆದು ಸಾಯಿಸಬಾರದು. ಈ ರೀತಿಯಾಗಿ ಹಾವುಗಳು ಕಾಣಿಸಿಕೊಂಡರೆ ಕೂಡಲೇ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು. ನಾವು ಅದನ್ನು ರಕ್ಷಿಸಿ ಸೂಕ್ತ ಸ್ಥಳಗಳಿಗೆ ಬಿಡುತ್ತೇವೆ ಎಂದು ಸ್ನೇಕ್ ಮಹೇಶ್ ಇದೆ ವೇಳೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net